ಜಯಶ್ರೀ ಭ ಭಂಡಾರಿ.ಗಜಲ್

ಕಾವ್ಯ ಸಂಗಾತಿ

ಗಜಲ್

ಜಯಶ್ರೀ ಭ ಭಂಡಾರಿ.

ವಿರಹದ ಉರಿಯ ಶಮನಕೆ ಮನದಂಗಳದಿ ಉಯ್ಯಾಲೆ ಕಟ್ಟಿದೆಯಾ ನೀನು.
ಅರುಹಿದ ಅನುರಾಗದ ಮೃದಂಗ ಅಂತರಂಗದಿ ಮೆಟ್ಟಿದೆಯಾ ನೀನು.

ಕಂಗಳದಿ ಕಟ್ಟಿದ ಸಾವಿರಾರು ಕನಸುಗಳು ಕರಗಿ  ಸೊರಗಿದವಲ್ಲವೇ
ಅಂಗಳದಿ ‌‌ಬೆಳೆದ ಗುಲಾಬಿಗೂ  ಮುಳ್ಳಿನ ಅರಗು ಇಟ್ಟಿದೆಯಾ ನೀನು 

ಪ್ರೇಮಿಯಾದರೆ ಸಾಲದು  ಅನುಗಾಲವೂ ಜೊತೆ ಇರುವ ಪಣವಿರಲಿ.
ರೋಮಿಯೋ ತರಹ ರೋಡಲಿ ಅಲೆದು ಬರುತ ದೂರ ಅಟ್ಟಿದೆಯಾ ನೀನು.

ನೂರು ಜನ್ಮಕೂ ದೊರೆಸಾನಿಯಾಗೋ ಬಯಕೆಗಳ ನಿಟ್ಟಿನಲಿ ನಿಂದಿಹೆ
ಊರು ಕೊಳ್ಳೆ ಹೊಡೆದರೂ ಸರದಾರ ಸಾಂಗತ್ಯದಿ ತಟ್ಟಿದೆಯಾ ನೀನು.

ಕಬ್ಬಿನ ಕಟಾವಿನ ಠಾವಿನಲಿ ಒಲವ ಮರೆತೆಯೆಂದು ಜಯಳಿಗೆ ಕೋಪ
ಮಬ್ಬಿನ ಮಲ್ಲಿಗೆ ಹಬ್ಬಿ ಘಮಿಸುವ ಘ್ರಾಣ ಗಾವುದ ಒಟ್ಟಿದೆಯಾ ನೀನು..


Leave a Reply

Back To Top