ಶಿವಾನಂದ ತಗಡೂರು
‘ಕೋವಿಡ್ ಕಥೆಗಳು’
‘ಕಾರ್ಯನಿರತ ಪತ್ರಕರ್ತರ ಸಂಘ’ದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರೂ ಮತ್ತು ಅವರ ‘ಕೋವಿಡ್ ಕಥೆಗಳು’ ಕೃತಿಯೂ..!
ಮತ್ತು ಟಿ.ಎಸ್.ಆರ್, ಮತ್ತು ಮೊಹರೆ ಹಣಮಂತರಾಯರ ಹೆಸರಿನ ಪ್ರಶಸ್ತಿಯನ್ನು ಅವರಿಗೆ ಕೊಡುವುದು ಈಗ ಸೂಕ್ತವೂ.!! —
ಕನ್ನಡದ ಖ್ಯಾತ ಪತ್ರಕರ್ತರಾದ ಶಿವಾನಂದ ತಗಡೂರು ಅವರ “ಕೋವಿಡ್ ಕಥೆಗಳು” ಈಗಾಗಲೇ ಲೋಕಾರ್ಪಣೆಯಾಗಿದ್ದು ಆ ಕೃತಿಯನ್ನು ಬಹುರೂಪಿ ಪ್ರಕಾಶನವು ಹೊರತಂದಿದೆ..!
ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್ ರವರು ಕೃತಿಯನ್ನು ಬಿಡುಗಡೆ ಮಾಡಿ “ಪ್ರಕೃತಿಯ ವಿರುದ್ಧ ಹೋದರೆ ಏನಾಗುತ್ತದೆ ಎನ್ನುವುದಕ್ಕೆ ಕರೋನ ಒಂದು ಮಹತ್ವದ ಉದಾಹರಣೆಯಾಗಿದೆ, ತಿನ್ನಬಾರದ್ದನ್ನು ತಿಂದರೆ, ಮಾಡಬಾರದ್ದನ್ನು ಮಾಡಿದರೆ ಪ್ರಕೃತಿ ಸೇಡು ತೀರಿಸಿಕೊಳ್ಳುವ ಬಗೆ ಇದು, ಶಿವಾನಂದ ತಗಡೂರು ಅವರು ಪತ್ರಕರ್ತ ಕುಟುಂಬಗಳಿಗೆ ಬೆಂಬಲವಾಗಿ ನಿಂತದ್ದೇ ಅಲ್ಲದೇ ಅವರ ಕುಟುಂಬದ ಕಣ್ಣೀರ ಕಥೆಗಳನ್ನು ದಾಖಲಿಸಿರುವುದು ಅಭಿನಂದನೀಯ..!
ಇದರಿಂದಾಗಿ ಒಂದು ಸಂಘ ಮನಸ್ಸು ಮಾಡಿದರೆ ಇಂತಹ ರಚನಾತ್ಮಕ ಕಾರ್ಯ ಮಾಡಬಹುದು ಎಂದೂ ಗೊತ್ತಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದರು..!
ಇನ್ನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು “ಕೋವಿಡ್” ನಮ್ಮ ಸರಕಾರ ಎದುರಿಸಿದ ಮಹಾ ಸಮಸ್ಯೆಯಾಗಿತ್ತು. ಪ್ರತಿಯೊಬ್ಬರ ಬದುಕನ್ನು ಕೋವಿಡ್ ಅಲುಗಾಡಿಸಿದೆ. ಇಂತಹ ಸಂದರ್ಭದಲ್ಲಿ ಶಿವಾನಂದ ತಗಡೂರು ಅವರು ಈ ಮಾರಣಾಂತಿಕ ರೋಗದಿಂದ ಸಾವನ್ನಪ್ಪಿದ ಕುಟುಂಬಗಳ ಪರವಾಗಿ ನಿಂತದ್ದು ಶ್ಲಾಘನೀಯ. ಅವರ ದೃಢ ಹೋರಾಟದಿಂದಾಗಿ ಅನೇಕ ಕುಟುಂಬಗಳು ನೆಮ್ಮದಿ ಕಂಡಿವೆ ಎಂದಿದ್ದರು..!
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ‘ವಿಶ್ವವಾಣಿ’ ಸಂಪಾದಕರಾದ ವಿಶ್ವೇಶ್ವರ ಭಟ್ಟರು, ‘ವಿಜಯವಾಣಿ’ಯ ಸಂಪಾದಕರಾದ ಕೆ.ಎನ್ ಚನ್ನೇಗೌಡರು, ಬಹುರೂಪಿಯ, ಜಿ. ಎನ್. ಮೋಹನ್ ಇನ್ನೂ ಮುಂತಾದ ಸಾಹಿತಿ ಗಣ್ಯರು ಈ ಕೃತಿಯ ಬಗೆಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿ ಸಂತಸ ಹಂಚಿಕೊಂಡಿದ್ದರು..!
ಇಂತಹ ನಾಡಿನ ಹೆಮ್ಮೆಯ ಪತ್ರಕರ್ತ ಮತ್ತು ಸಾಹಿತಿ ಶಿವಾನಂದ ತಗಡೂರು ಅವರಿಗೆ ನಾಡಿನ ಹೆಮ್ಮೆಯ ಟಿ.ಎಸ್.ಆರ್. ಮತ್ತು ಮೊಹರೆ ಹಣಮಂತರಾಯರ ಹೆಸರಿನಲ್ಲಿ ಕೊಡಮಾಡುವ ಪ್ರಶಸ್ತಿಯನ್ನು ಕೊಡಲೇ ಬೇಕಾಗಿದೆ. ಏಕೆಂದರೆ ಆ ಪ್ರಶಸ್ತಿಗೆ ಒಂದು ಗೌರವವು ಬರಬೇಕಾದರೆ ನಾಡಿನ ಹೆಮ್ಮೆಯ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಸಾಹಿತಿಯಾಗಿಯೂ ಜನರ ಕೆಲಸಗಳನ್ನು ಮಾಡುತ್ತಲೇ ಬಂದವರು..!
ಅಷ್ಟೇ ಅಲ್ಲದೇ ನಾಡಿನ ಹಿರಿಯ ಪತ್ರಕರ್ತರನ್ನು ಗುರುತಿಸಿ ‘ಮನೆಯಂಗಳದಲ್ಲಿ ಮನದುಂಬಿ ನಮನ’ ಎಂಬ ನಾಡಿನ ಹಿರಿಯ ಪತ್ರಕರ್ತ ಚೇತನಗಳ ಮನೆಗೇ ಹೋಗಿ ಗೌರವಿಸುತ್ತಾ ಬಂದವರು ಇದೇ ಶಿವಾನಂದ ತಗಡೂರು ಅವರು. ಅವರಿಗೆ ಅಷ್ಟೇ ಗೌರವವನ್ನು ಕೊಡುವ ಕಾರ್ಯವನ್ನು ಮಾಡುತ್ತಲೇ ಬಂದವರು. ಇದಿಷ್ಟೇ ಅಲ್ಲದೇ ಪತ್ರಿಕೆಯ ಕೆಲಸಗಳಲ್ಲಿ ತೊಡಗಿ, ಹಾಗೆಯೇ ಜೀವ ಕಳೆದುಕೊಂಡ ಮತ್ತು ಅದೇ ಕೆಲಸದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪತ್ರಿಕೆಯ ಕೆಲಸದಲ್ಲಿ ತೊಡಗಿಕೊಂಡು ಭಾರೀ ಪ್ರಮಾಣದ ತೊಂದರೆಯಲ್ಲಿ ಇರುವ ಪತ್ರಕರ್ತರಿಗೆ ಒಂದಿಷ್ಟು ಸಾಂತ್ವನ ಹೇಳುವ ಮೂಲಕವೂ ಶಿವಾನಂದ ತಗಡೂರು ಅವರು ಸಹಾಯವನ್ನು ಸರ್ಕಾರದಿಂದ ಕೊಡಿಸುವ ಕೆಲಸಗಳನ್ನು ಮಾಡುತ್ತಲೇ ಬಂದವರು..!
ಹೀಗೆಯೇ ಅನೇಕಾನೇಕ ಪತ್ರಕರ್ತರ ಸಂಘದ ಕೆಲಸಗಳನ್ನು ಮಾಡುತ್ತಲೇ ಇದ್ದವರು ಈ ಶಿವಾನಂದ ತಗಡೂರು ಎಂಬ ಸಾಹಿತಿ ಮತ್ತು ಪತ್ರಕರ್ತ ಹಿರಿಯ ಗೆಳೆಯರು. ಹೀಗೆಯೇ ಈ ಬಾರಿಯ ಈ ಟಿ.ಎಸ್.ಆರ್. ಮತ್ತು ಮೊಹರೆ ಹಣಮಂತರಾಯರ ಹೆಸರಿನಲ್ಲಿಯ ಪ್ರಶಸ್ತಿಯನ್ನು ಇದೇ ಶಿವಾನಂದ ತಗಡೂರು ಅವರಿಗೆ ಕೊಟ್ಟರೆ ಅದಕ್ಕೊಂದು ಗೌರವವನ್ನು ಕೊಟ್ಟಂತಾಗುತ್ತದೆ..!
# ಟಿ.ಎಸ್.ಆರ್ ಮತ್ತು ಮೊಹರೆ ಹಣಮಂತರಾಯರ ಹೆಸರಿನ ಪ್ರಶಸ್ತಿಯು ಈ ಶಿವಾನಂದ ತಗಡೂರು ಅವರಿಗೇ ಲಭಿಸಬೇಕು..! —
ನಾಡಿನ ಹೆಸರಾಂತ ಪತ್ರಕರ್ತರಾದ ಟಿ.ಎಸ್.ಆರ್. ಮತ್ತು ಮೊಹರೆ ಹಣಮಂತರಾಯ ಹೆಸರಿನಲ್ಲಿ ಹಿರಿಯ ಪತ್ರಕರ್ತರಿಗೆ ವಾರ್ತಾ ಇಲಾಖೆ ಕೊಡ ಮಾಡುವ ಪ್ರಶಸ್ತಿ 3 ವರ್ಷದಿಂದ ಬಾಕಿ ಇದ್ದು ಕೂಡಲೇ ಪ್ರಧಾನ ಮಾಡುವಂತೆ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ)ಯು ಒತ್ತಾಯಿಸಿದೆ..!
ಪತ್ರಿಕೋದ್ಯಮದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದ್ದು, ಪ್ರಶಸ್ತಿಗೆ ಆಯ್ಕೆಯನ್ನು ಮಾಡಲಾಗಿದೆ. ಆದರೂ ಈ ತನಕ ಪ್ರದಾನ ಮಾಡಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಿಗೆ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಮತ್ತು ಸಾಹಿತಿಗಳಾದ ಶಿವಾನಂದ ತಗಡೂರು ಅವರಿಗೇ ಕೊಡಮಾಡಬೇಕು ಎಂದು ‘ಕರ್ನಾಟಕ ಕಾರ್ಯನಿaರತ ಪತ್ರಕರ್ತರ ಸಂಘ’ವು ಒತ್ತಾಯಿಸಿದೆ..!
ಕೂಡಲೇ ದಿನಾಂಕ ನಿಗದಿ ಮಾಡಿ ತಾವು ಪ್ರಶಸ್ತಿಯನ್ನು ಪ್ರದಾನ ಮಾಡಬೇಕು ಎಂದೂ ಆ ಪತ್ರದಲ್ಲಿ ಒತ್ತಾಯಿಸಿದೆ ಕೆಯುಡಬ್ಲ್ಯೂಜೆಯು ಅಂದರೆ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ವು..!
ಕೆ.ಶಿವು.ಲಕ್ಕಣ್ಣವರ