ರಂಗಸ್ವಾಮಿ ಮಾರ್ಲಬಂಡಿ ಕವಿತೆ, ಚಳಿ ಸಮುದ್ರದ ಪಕ್ಷಿ

ಕಾವ್ಯ ಸಂಗಾತಿ

ಚಳಿ ಸಮುದ್ರದ ಪಕ್ಷಿ

ರಂಗಸ್ವಾಮಿ ಮಾರ್ಲಬಂಡಿ

ಕಾಲ್ಗೆಜ್ಜೆಯ ಮೌನ
ಸ್ಪರ್ಶ ಬೇಡುವ ಕೈ
ತಣ್ಣನೆಯ ದೇಹಕ್ಕೆ
ತಂಗಾಳಿ ತಾಕುತಿದೆ..!

ಬೇವಿನ ಮರದಿ ಕಾಗೆ ಗುಂಪಿನ
ಗದ್ದಲ..!
ದೂರದಲೊಂದು ನಾಯಿಯ ಬೈಗುಳ..!
ನರಿ ಕಪ್ಪೆಗಳು ತಮ್ಮ ಅಸ್ಥಿತ್ವಕ್ಕೆ ಸಾಕ್ಷಿ ಆಗಿವೆ ಸವತ್ತಿನ ರಾತ್ರಿಯಲಿ…!

ಹೊರಬಾರದ ಕಣ್ಣೀರಿಗೆ ಆಗೋ ಆ ಸಾಕ್ಷಿಯಾಗಿದೆ ನೋಡು
ನಾಯಿಯ ರೋಧನೆ
ನರಿಯ ಅಳಲು..!

ಸುತ್ತಲಿನ ಜೊತೆಗಾರರು ಬೊಗಳುತಿಹರು
ಊರಾಗಿಲ್ಲದ ಪ್ರೀತಿ
ನೀನೆ ಮಾಡಿರೆವೆಂದು…!
ಬೆಂಬಲಿಗರು ನಿಂತಿಹರು ಅವರ ಬಗೆಗಿನ ಕದನಕ್ಕೆ….!

ಓ…!
ಹೊರಡು ಹೊರಡು
ನಿರ್ಮಲಾಕಾಶದಲಿ ಬಿಳಿ ಪಕ್ಷಿಯಾಗಿ
ರೆಕ್ಕೆ ಇರುವೆವೆಂಬ ಜಂಬದಲಿ…!

ಜಂಭ…! ಬೇಡ ಬೇಡ
ಕರುಣೆಯೂ ಇದೆ ನೋಡು
ನಿನ್ನ ಏಕಾಂಗಿ ಪಯಣಕ್ಕೆ
ಚಳಿ ಸಮುದ್ರದಲಿ ಬೆಚ್ಚನೆಯ ಬೆಂಕಿಗೆ ನಾಂದಿ ಹಾಡಲು….!


ರಂಗಸ್ವಾಮಿ ಮಾರ್ಲಬಂಡಿ

Leave a Reply

Back To Top