ಬೆಂಶ್ರೀ ರವೀಂದ್ರ-ಕವಿತೆ

ಕಾವ್ಯ ಸಂಗಾತಿ

ಬೆಂಶ್ರೀ ರವೀಂದ್ರ-ಕವಿತೆ

ಬೆಳಗುವುದೇ ಈ ದೀಪಾವಳಿ
ಬಲೀಂದ್ರ ಬರುವನೆ ಪಾಡ್ಯಕ್ಕೆ
ಅವನ ರಾಜ್ಯವು ಎಂತಿಹುದು
ನಮಗೇ ಗೊತ್ತು ಪ್ರಜೆಗಳಿಗೆ

ಹೊಂಡ ಹಳವಂಡಗಳುಂಟು
ಅರಮನೆ ಮಾತಿನ ಗತ್ತುಂಟು
ಏರಿದ ಗಾಳಿಪಟದ ಮಾಂಜಿಗೆ
ಸವರಿದ್ದಾರೆ ಪುಡಿಗಾಜ ಅಂಟು

ಬಲೀಂದ್ರಗೆ ಗೊತ್ತು ಈ ಗುಟ್ಟು
ಇಳಿದ ವಿಷ್ಣುಪಾದ ಶಿರದಲಿಟ್ಟು
ಸುತಳಕವ ಮಹಾಭಕ್ತಬಂಧು
ದಾನಪಡೆದವ ತ್ರಿಲೋಕಬಂಧು

ಬುವಿಯಲ್ಲಿ ವಿನೀತ ಪ್ರಜೆಗಳು
ದೇವ ದಾನವ ಲೋಕವಲ್ಲವಿದು
ದೇವನಾಗದೆ ದಾನವನಾಗಿಹನು
ಮುಕ್ಕುತ ಮನುಜ ಅನುಜರನು

ದೀಪವ ಹಚ್ಚೋಣ ನಂಬಿಕೆಯಲಿ
ಕತ್ತಲು ಕಳೆದು ಕಣ್ಣು ಕಾಣಲೆಂದು
ಹುಣ್ಣುಮಾಗಿ ಜಗ ಹಸನಾಗಲೆಂದು
ಇಳೆಗೆ ದೀವಳಿಗೆ ಸೌಖ್ಯವಾಗಲೆಂದು


Leave a Reply

Back To Top