ಅಂಕಣ ಸಂಗಾತಿ

ಸಕಾಲ

ಸೌಜನ್ಯ ಸಹಿತ ಜೀವನ ಸತ್ಯದರ್ಶನ.

ಮಾತು ಬಲ್ಲವನಿಗೆ ಜಗಳವಿಲ್ಲ,ಊಟಬಲ್ಲವನಿಗೆ ರೋಗವಿಲ್ಲ.ಈ ಗಾದೆಯ ಕುರಿತು ತಿಳಿಯದ ಹಾಗೂ ಆಯಾ ಸಂದರ್ಭದಲ್ಲಿ ಮಾನ,ಅಪಮಾನ,ಗೌರವ, ಅಗೌರವಗಳನ್ನು ಎದುರಿಸಿದವರು ಇದ್ದೆ ಇರುತ್ತಾರೆ. ಅದೆಷ್ಟೋ ಜನರಿಗೆ ಜಗಳವಾಡಲು ಸಮಯ ಬೇಕಿಲ್ಲ, ನೆಪವೊಂದಿದ್ದರೆ ಸಾಕು.ಕಾಲು ಕೆದರಿ ಜಗಳವಾಡುವವರನ್ನು ಜಗಳ ಗಂಟರು ಎಂದು ಕರೆದಿದ್ದುಂಟು.ಮಾತು ಮಾತಿಗೆ ಬೆಳೆದು ಅದ್ಯಾವುದೋ ಒಂದು ಸಮಯದಲ್ಲಿ ಒಂದು ಕೆಟ್ಟ ಮಾತನಾಡಿ ಬಿಡುತ್ತೇವೆ ಕೊನೆಗೆ ಮನಸ್ಸು ಹದವಾದಾಗುತ್ತ ಬಂದಾಗಲೋ ಅಥವಾ ಆಲಿಸಿದವರು ಹಿಡಿದು ತದಕಿದಾಗಲೋ ನಮ್ಮ ಆ ಕೆಟ್ಟ ಮಾತಿನ ಪರಿಣಾಮ ಅರಿತು ಪಶ್ಚಾತ್ತಾಪ ಪಡುವಾಗಂತೂ ಕಣ್ಣುಗುಡ್ಡೆಗಳು ಗಂಗಾ ಭಾಗಿರಥಿ ಹರಸಿದಂತೆ ಒದ್ದೆಯಾಗುತ್ತವೆ. ಎಲ್ಲರಿಗೂ ಸಮಾನವಾದ ಸಹಾನುಭೂತಿಯನ್ನು ತೋರುವುದೇ ನಮ್ಮ ಧರ್ಮ.

ಸೌಜನ್ಯವನ್ನು ವರ್ಗೀಕರಿಸಲಾಗಿದೆ, ಅದು ಬಳಸಿದ ಅಭಿವ್ಯಕ್ತಿಗೆ ನೀಡುವ ಉದ್ದೇಶ ಅಥವಾ ಅರ್ಥದಿಂದ ಭಿನ್ನವಾಗಿರುತ್ತದೆ.ಸಕಾರಾತ್ಮಕ ಸೌಜನ್ಯವು,ಪಕ್ಷಗಳ ನಡುವೆ ಸೌಹಾರ್ದಯುತ ಸಂಬಂಧವನ್ನು ಸ್ಥಾಪಿಸಲು ಪ್ರಯತ್ನಿಸುವದು ಅದು. ಇನ್ನೊಂದನ್ನು ಅರ್ಥಮಾಡಿಕೊಳ್ಳಲು ಒಂದು ಮಾರ್ಗವನ್ನು ಕಂಡುಕೊಳ್ಳಿ ಮತ್ತು ಅದರಲ್ಲಿ ನಿಮ್ಮ ಆಸಕ್ತಿಯನ್ನು ತೋರಿಸಿ. ಉದಾಹರಣೆಗೆ, “ಈ ಗಮನಗಳೊಂದಿಗೆ ನಮ್ಮನ್ನು ಸ್ವೀಕರಿಸಲು ಅವರು ತುಂಬಾ ಕರುಣಾಮಯಿ.”ಸೌಮ್ಯಸ್ವಭಾವದವರು.ಮೆಚ್ಚುಗೆಗೆ ಪಾತ್ರರಾಗುವವರನ್ನು ಆತ್ಮೀಯ ಸ್ನೇಹಿತನಂತೆ.

ಠಕ್ಕ ನರಿ ಮತ್ತು ಕೊಕ್ಕರೆ ಕಥೆ ಯಾರಿಗೆ ತಾನೆ ಗೊತ್ತಿಲ್ಲ ಅತಿಥಿ ಸತ್ಕಾರದಲ್ಲಿ ಆಗುವ ಬದಲಾವಣೆಗಳನ್ನು ಕಂಡಾಗ ಸೌಜನ್ಯ ಎಲ್ಲಿದೆಯೆಂಬುದು ಅರ್ಥವಾಗುತ್ತದೆ.ಕಠೋರ ಹಾಗೂ ಬುದ್ದಿಕಲಿಸುವ ತಂತ್ರ,ನರಿ,ಕೊಕ್ಕರಗೆ ಮಾಡುವ ಮುಖಭಂಗ, ಅದಕೆ ಪ್ರತಿ ತಂತ್ರ ಹೀಗೆ ಸಾಗುವ ಕಥೆ ಎಂತಹ ಅದ್ಭುತವಾದ ಸಂದೇಶ ಸಾರಿದೆ.

“ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು” ಅಂತಲ್ಲವೇ.

ಇರುವೆ ಮತ್ತು ಪಾರಿವಾಳದ ಕಥೆಯು ಪರಸ್ಪರ ಸಂಬಂಧವನ್ನು ಬೆಸೆಯುವ ಹಾಗೂ ಕರುಣೆ ದಯೆ,ಸೌಹಾರ್ದತೆಗೆ ಹೆಸರಾಗಿದೆ.ಪಯಣದ ನಡುವೆ

ಹಿರಿಯರು ಸಿಕ್ಕಾಗ ಅವರೊಂದಿಗೆ ಸಂವಹನ ಮಾಡುವ ರೀತಿ ಕಲಿಯುವುದು ಕಲಿಸುವುದು ಅನಿವಾರ್ಯ. ಕೈ ಕೈ ಜೋಡಿಸಿದರೆ ಮಾನವ ಸರಪಳಿಯಾದಿತು.ಹಸ್ತಾಂದೋಲನ ಸೌಜನ್ಯದ ನಡೆಗೆ ದಾರಿಮಾಡಿಕೊಟ್ಟಂತೆ.

ಕೂಡಿದ್ದು ಕಳೆದಿದ್ದು ಎಲ್ಲ ಗೌಣ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಲ್ಲಿ ಮಾತ್ರ ಬದುಕು ನಿಭಾಯಿಸಲು ಸಾಧ್ಯ.

ಸೌಜನ್ಯ ಎಂದರೆ,ಇನ್ನೊಬ್ಬ ವ್ಯಕ್ತಿಯ ಬಗ್ಗೆ ದಯೆ, ಗಮನ ಅಥವಾ ಉತ್ತಮ ನಡತೆ.

ಸೌಜನ್ಯ ಸಭ್ಯ ಪದದಿಂದ ಬಂದಿದೆ ಅವರು ಗಮನ ಮತ್ತು ವ್ಯಕ್ತಿತ್ವವನ್ನು ಸೂಚಿಸಲು ಬಳಸುತ್ತಾರೆ. ಸೌಜನ್ಯಕ್ಕೆ ಸಮಾನಾರ್ಥಕ ಪದಗಳು ಈ ಕೆಳಗಿನ ಪದಗಳಾಗಿವೆ: ದಯೆ, ಸೌಹಾರ್ದತೆ, ನಯತೆ, ಅಭಿನಂದನೆ, ಕೈಚಳಕ, ಪರಿಗಣನೆ ಅಥವಾ ಪ್ರೋಟೋಕಾಲ್.

ಪ್ರತಿಯೊಬ್ಬ ವಿಭಿನ್ನ ವ್ಯಕ್ತಿತ್ವ ಹೊಂದಿರುವನು. ಉದಾ.ಭಗವಾನ್ ಬುದ್ದ, ಭಗತ್ ಸಿಂಗ್ ನಂತಹ ವೀರ ಸೇನಾನಿ,ಒನಕೆ ಓಬವ್ವ,ಕಿತ್ತೂರ ರಾಣಿ ಚನ್ನಮ್ಮ,ಸರೋಜಿನಿ‌ ನಾಯ್ಡು,ಕಸ್ತೂರ ಬಾ,ಪುತಳಿಬಾಯಿ,ಸಾಮ್ರಾಟ ಅಶೋಕ,ಛತ್ರಪತಿ ಶಿವಾಜಿ,ಅಣ್ಣ ಬಸವಣ್ಣ,ಅಲ್ಲಮಪ್ರಭು,ಸ್ವಾಮಿ ವಿವೆಕಾನಂದ, ಅಕ್ಕಮಹಾದೇವಿ,ಮದರ ಥೆರೆಸಾ,ಸಲೀಂ ಅಲಿ,ಎ ಪಿ ಜೆ ಅಬ್ದುಲ್ ಕಲಾಂ,ಡಾ. ಅಂಬೇಡ್ಕರ್, ಹೀಗೆ ಇತಿಹಾಸದ ಪುಟ ಪುಟಗಳಲ್ಲಿ ದಯೆ,ಸೌಹಾರ್ದತೆಗೆ ಮೆಚ್ಚುಗೆಗೆ ಪಾತ್ರರಾಗುವ ಸಾವಿರಾರು ಉದಾ.ಕಾಣಸಿಗುತ್ತವೆ.

ಆದ್ದರಿಂದ, ಸೌಜನ್ಯವು ನಾವೀನ್ಯತೆ ಮತ್ತು ಶಿಕ್ಷಣದ ಪ್ರದರ್ಶನ ಅದು ಉತ್ತಮ ಪದ್ಧತಿಗಳ ಮೂಲಕ ವ್ಯಕ್ತವಾಗುತ್ತದೆ. ಉದಾಹರಣೆಗೆ, “ನನ್ನನ್ನು ಸ್ವೀಕರಿಸುವ ಸೌಜನ್ಯ ತುಂಬಾ ಆಹ್ಲಾದಕರವಾಗಿತ್ತು”, “ಶಾಲಾ ಮಕ್ಕಳಿಗೆ ಮೆಚ್ಚುಗೆಯ ಸೌಜನ್ಯವಿದೆ”.

ತಪ್ಪಿಗೆ ಶಿಕ್ಷೆಯೇ ಗುರಿಯಲ್ಲ,ಪಶ್ಚಾತ್ತಾಪಕ್ಕೆ ಕಣ್ಣೀರು ಸಾಕೆ? ಮಾತು ಮನೆ ಕೆಡುಸಿತು ತೂತು ಒಲೆಕೆಡಿಸಿತು ಎನ್ನುವ ಗಾದೆಯನ್ನು ಮರೆಯಲಾದಿತೆ?ಹಾಗೆಯೇ ಪರಸ್ಪರ ಗೌರವಿಸುವ ಕಲೆ ನಮ್ಮೊಳಗೆ ಬಾಲ್ಯದಿಂದಲೇ ಬರಬೇಕು.ನಂತರ ಸಮಾಜದಿಂದ ಬೆರೆಯಬೇಕು.

ಗಿಳಿಪಾಠ ಎಂದಿಗೂ ಪರಿಣಾಮಕಾರಿಯಲ್ಲ. ಪ್ರಾಯೋಗಿಕ ಪರೀಕ್ಷೆಗಳು ಹೆಜ್ಜೆ ಹೆಜ್ಜೆಗೂ ನಡೆದಾಗಲೇ ಅದರ ಬೆಲೆ ಹಾಗೂ ಮಹತ್ವ ಗಣನೀಯವಾಗಿ ಹೆಚ್ಚುತ್ತದೆ.ಸೌಜನ್ಯದ ಮುಖಾರವಿಂದ,ದೈಹಿಕ ಚಲನೆ ಎಲ್ಲವೂ ಅವಲಂಬಿಸಿರುತ್ತದೆ.ಅಂತಹ ಗಮನವನ್ನು ಪ್ರತಿಬಿಂಬಿಸುವ ವಿವಿಧ ನುಡಿಗಟ್ಟುಗಳ ಬಳಕೆಯ ಮೂಲಕ ಸೌಜನ್ಯವನ್ನು ನೀಡಬಹುದು, ಜೊತೆಗೆ ಉತ್ತಮ ನಡವಳಿಕೆಯ ಪ್ರತಿಬಿಂಬಗಳನ್ನೂ ಸಹ ಉಲ್ಲೇಖಿಸಬೇಕಾಗಿದೆ. ಬಳಸಲು ಬಳಸುವ ಸೌಜನ್ಯದ ನುಡಿಗಟ್ಟುಗಳಲ್ಲಿ,

ಸಾಮಾನ್ಯವಾಗಿ ಇಂದಿನ ದಿನಮಾನದಲ್ಲಿ ಮೊಬೈಲ್ ಪ್ರಪಂಚದಲ್ಲಿ Good morning,Good night,

ಶುಭೋದಯ,ಬೆಳಗಿನ ನಮಸ್ಕಾರ, ಸುಪ್ರಭಾತ ಹೀಗೆ ಹಲವಾರು ಸಂದೇಶಗಳು ವಾಟ್ಸಪ್ ತುಂಬ ಹರಿದಾಡಿದ್ದು ವಿಶೇಷವೆನಿಲ್ಲ.ಆದ್ರೆ ಎದುರುಬದುರಾಗಿ ಬೇಟಿಯಾದಾಗ ಮನಸೋಯಿಚ್ಛೆ ಹಸ್ತಾಂದೋಲನ ಮಾಡುವುದರ ಜೊತೆಗೆ ಅವರವರ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಅಭಿನಂದಿಸಿ ಮಾತನಾಡುವ ಸೌಜನ್ಯ ಇದ್ದಾಗ ಮಾತ್ರ ಅದಕ್ಕೊಂದು ಬೆಲೆ.

ನಿಮ್ಮನ್ನು ಭೇಟಿಯಾಗುವುದು ಸಂತೋಷದ ಸಂಗತಿ,

ನಮ್ಮಿಂದ ತೊಂದರೆಗೊಳಗಾಗುವಂತಾಯಿತು ಕ್ಷಮಿಸಿ.

ಮೊದಲನೆಯದಾಗಿ, ಸೌಹಾರ್ದಯುತ ಶುಭಾಶಯ.

ನೀವು ಗಮನಹರಿಸಿದ್ದಕ್ಕಾಗಿ ಧನ್ಯವಾದಗಳು.

ಈ ವಿಳಾಸವನ್ನು ಹುಡುಕಲು ನೀವು ನನಗೆ ಸಹಾಯ ಮಾಡಬಹುದು ಎನ್ನುವ ವಿನಮ್ರ ಕೋರಿಕೆಯೆಲ್ಲವೂ ಸೌಜನ್ಯದ ಭಾಗವೇ.

ಯಾರನ್ನಾದರೂ ಅಸಹಾಯಕ ಸ್ಥಿತಿಯಲ್ಲಿ ಗಮನಿಸಿದ್ದಾದರೆ ನಿಮ್ಮ ಕಣ್ಣೇದುರಿನ ಆ ಘಟನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದರೆ ಮಾತ್ರ ನಿಮ್ಮ ಶಿಷ್ಟಾಚಾರದ ಸಂಸ್ಕಾರಗಳು ಬಳಕೆಯಲ್ಲಿ ಅನ್ವಯದಲ್ಲಿದೆಯೆಂದು ತಿಳಿದಷ್ಟು ಮನಸ್ಸಿಗೆ ಸಂತೋಷ.

ಅಂತೆಯೇ, ಸೌಜನ್ಯ ಸೂತ್ರ ಎಂದು ಕರೆಯಲ್ಪಡುವ ಮತ್ತು ಅದು ಇತರ ವ್ಯಕ್ತಿಯೊಂದಿಗೆ ವರ್ತಿಸುವ ಮನೋಭಾವಕ್ಕೆ ಅನುಗುಣವಾಗಿರುತ್ತದೆ ಎಂದು ಸೇರಿಸಬೇಕು. ಉದಾಹರಣೆಗೆ, ನೀವು ಸಂಭಾಷಣೆಯನ್ನು ಅಡ್ಡಿಪಡಿಸುವುದಿಲ್ಲ, ನೀವು ಎಚ್ಚರಿಕೆಯಿಂದ ಆಲಿಸುತ್ತೀರಿ, ಕೀಟಲೆ ಅಥವಾ ಅಪರಾಧಗಳನ್ನು ತಪ್ಪಿಸುತ್ತೀರಿ, ಇತರರಲ್ಲಿ ನೀವು ಆಹ್ಲಾದಕರ ಚಿಕಿತ್ಸೆಯನ್ನು ನೀಡುತ್ತೀರಿ ಎಂದಾದರೆ ಅದೊಂದು ಪ್ರಶಂಸನೀಯ ಕೆಲಸ.


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

2 thoughts on “

  1. ಕೂಡಿದ್ದು,ಕಳೆದಿದ್ದು ಗೌಣ,ಮಾನವೀಯತೆಯೇ ಪ್ರಧಾನವೆಂಬುದು ಸೂಕ್ತ ಹಾಗೂ ಪ್ರಶಂಸಾರ್ಹ.

  2. ಪ್ರತಿಯೊಂದು ಸಾಲುಗಳಲ್ಲಿನ ಅಥ೯ ಸುಂದರವಾಗಿ ಮುತ್ತಿನಂತೆ ಪೋಣಿಸಿ ಬರೆದಿರುವೆ ಗೆಳತಿ….ಸೂಪರ್

Leave a Reply

Back To Top