ಕಾವ್ಯ ಸಂಗಾತಿ
ವಿಶಾಲಾ ಆರಾಧ್ಯ
ಗಜಲ್
ನಿನ್ನೊಲವ ಈ ಸಂಭಾಷಣೆಯಲ್ಲಿ
ಮನದ ಹಾಳೆಯ ಮೇಲೆ
ಅದೆಷ್ಟು ಅಕ್ಕರಗಳ ಗೀಚಿದವೋ
ನಲಿದು ನಗುವ ಜೋಡಿ ತುಟಿಗಳು
ನಿನ್ನೊಲವ ಈ ಪ್ರೇಮದ ಹರಟೆಯಲಿ
ಹೃದಯದ ಗೋಡೆಯ ಮೇಲೆ
ಅದೆಷ್ಟು ಬೆಳಕ ಚೆಲ್ಲಿದವೋ
ಬೆಳಗಿ ಹೊಳೆವ ಜೋಡಿ ಕಂಗಳು
ನಿನ್ನ ಅಗಲಿಕೆಯ ಗೈರ ಘಳಿಗೆಯಲಿ
ಕಾದ ಒಡಲಿನ ಆಳದಲಿ
ಅದೆಷ್ಟು ತಳಮಳ ಕಳವಳಿಸಿತೋ
ಕಾದು ಕಾದು ಸೋತ ಆ ಕ್ಷಣಗಳು
ನೀ ಬಂದೇ ಬರುವೆಂಬ ಖಾತ್ರಿಯಲಿ
ಜೀವ ಹೂವಾದ ರಾತ್ರಿಯಲ್ಲಿ
ಅದೆಷ್ಟು ಮನ ಕುಣಿದು ಕುಪ್ಪಳಿಸಿತೋ
ನಿನ್ನ ರೂಪ ನೆನೆದ ಆ ನೆನಪೊಳು
ನೀ ಬಂದು ಕರವಿಡಿದ ಒಲವಲಿ
ಹೂವಂತೆ ಮೃದುವಾದ ಸಮಯದಿ
ಅದೆಷ್ಟು ಹಿತವಿತ್ತು ಮಿತವಿತ್ತೋ
ವಿಶುವನಪ್ಪಿ ಬಂಧಿಸಿದ ತೆಕ್ಕೆಯೊಳು
ವಿಶಾಲಾ ಆರಾಧ್ಯ
So deep into and someone eternally waiting for one is beautifully described, wow nicely made words