ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಅನುವಾದ ಕ್ರಿಯೆ

ಬಾಗೇಪಲ್ಲಿ

   ಸಹೃದಯರೇ,

ಸಾಹಿತ್ಯದ ಯಾವುದೇ ಪ್ರಾಕಾರದ ಕೃತಿ ಅತೀ ಉತ್ತಮವಾಗ ಬೇಕಾದರೆ, ಅದು ಅನುವಾದ ಕ್ರಿಯೆಯೆಂಬ ಪರೀಕ್ಷೆಯಲ್ಲೂ ಉತ್ತೀರ್ಣವಾಗಬೇಕೆಂದು ಎಲ್ಲೊ ಓದಿದ ನೆನಪು. ಅಂದರೆ, ಯಾವುದೇ ಕೃತಿ ಎಲ್ಲಾ ವಿದಧಿ ಸರಿಯಿದ್ದು  ಬೇರೆ ಬಾಷೆಗೆ ಅನವಾದ ಮಾಡಲು ಸಾಧ್ಯವಾಗದೆ ಹೋದರೆ, ಅದು ಒಂದು ಕುಂದು ಇದ್ದಂತಯೇ ಸರಿ.

ಇದನ್ನು ನಾವು ಸರಿ ಎಂದು ಭಾವಿಸಿದೆವಾದರೆ, ಲೇಖಕನು ಕೃತಿರಚನೆ ಮಾಡುವಾಗ ಇತರ ಪ್ರಮುಖ ಭಾಷೆಗಳಿಗೆ ತರ್ಜಿಮೆಗೆ ಅನಕೂಲಕರ ಆಗುವಂತೆ ರಚಿಸ ಬೇಕೆಂಬ ಅಂಶವನ್ನೂ ಯೋಚಿಸಿ ಕೃತಿ ರಚಿಸ ಬೇಕಾಗುತ್ತದೆ.

ಹಾಗೆಂದಾಗ ಕೃತಿ ರಚನೆ ಕಾರನಿಗೆ ಅನ್ಯ ಎಲ್ಲಾ ಭಾಷೆಗಳ ಪೂರ್ಣ ಅರಿವು ಇರಬೇಕೆಂದೇನಿಲ್ಲ.

ಕೃತಿ ರಚಿಸುವಾಗ ರೂಡಿ ಇಲ್ಲದ ,ಬಹಳ ಗ್ರಾಂಥಿಕವಾದ, ಪಾಂಡಿತ್ಯ ಪೂರ್ಣ ವಾಕ್ಯಗಳಿಂದ ರಚಿಸದೆ. ಸರಳ ವಾಕ್ಯಗಳನು ಬಳಸುವುದು ಒಳಿತು.

ಅದರಲ್ಲೂ ದಕ್ಷಿಣದ ದ್ರಾವಿಡ ಭಾಷೆಗಳನ್ನು ಉದ್ದೇಶ ಪೂರ್ವಕ ಅಭ್ಯಾಸ ಮಾಡದೆಯೂ ಸಹಜವಾಗಿ ವಾಕ್ಯಜೋಡಣೆಗಳು ಒಂದೇ ಆಗಿದ್ದು ,ಒಂದರಿಂದೊಂದಕೆ ಅನುವಾದ ಪ್ರಕ್ರಿಯೆ ಸ್ವಲ್ಪ ಸುಲಭ. ಉರ್ದು, ಹಿಂದಿ, ಬೆಂಗಾಲಿ,ಗುಜರಾತಿ,ಮರಾಠಿ, ಕಷ್ಮೀರಿ ಗಳು ದ್ರಾವಿಡ ಭಾಷೆಗೆ ಅನುವಾದಿಸುವುದು ಕಷ್ಟಸಾಧ್ಯ.

ಇತ್ತೀಚೆಗೆ ಬಹುಭಾಷಾ ಪಂಡಿತರು, ಸಾಹಿತ್ಯಸಕ್ತರು ಹೆಚ್ಚಾಗಿದ್ದು, ಅಂತರ್ಜಾಲ ಸೌಕರ್ಯವೂ ಲಭ್ಯವಿದ್ದು ಸಾಕಷ್ಟು ಕೃತಿಗಳು ಅನವಾದ ಆಗುತ್ತಿವೆ.

ಅಂತರಾಷ್ಟ್ರೀಯ ಭಾಷೆ ಇಂಗ್ಲಿಷ್ ವಿಷಯಕ್ಕೆ ಬಂದರೆ, ಅದೊಂದು ಬೇರೆಯದೇ ಆದಂತಹ ತೊಂದರೆ.

ಎಷ್ಟೇ ಆದರೂ ವಿದೇಶಿ ಭಾಷೆ, ನಮ್ಮ ಅಣ್ಣ ತಮ್ಮಂದಿರ ಭಾಷೆಯಲ್ಲಾ, ಅದರ ರಚನಾ ವ್ಯಾಕರಣವೇ ಬೇರೆ.

ಹಲವಾರು ದೇಶಗಳಲ್ಲಿ ಮತ್ತು ನಮ್ಮ ದೇಶದಲ್ಲಿ ಕಡಿಮೆ ಜನದಲ್ಲಿ ಆದರೂ ಹೆಚ್ಚು ಪ್ರದೇಶದಲ್ಲಿ ಇಂಗ್ಲಿಷ್ ಬಳಕೆಯಲ್ಲಿದೆ..

ಇದು ಎಷ್ಟು ಮಟ್ಟಿಗೆಂದರೆ, ನಮ್ಮದೇಶದ ಭಾಷೆಯೇ ಆದ ಮಲಯಾಳ, ಬೆಂಗಾಲಿ ಭಾಷೆಯ ಒಳ್ಳೆಯ ಕೃತಿಗಳು ನೇರವಾಗಿ ನಮ್ಮ ಇತರ ಭಾರತೀಯ ಭಾಷೆಗಳಿಗೆ ಅನುವಾದವಾಗುವುದು ಕಡಿಮೆ, ಆದರೆ ಮೊದಲು ಇಂಗ್ಲಿಷ್ಗೆ ತರ್ಜಿಮೆಯಾಗಿ, ನಂತರ ಇಂಗ್ಲಿಷ್ನಿಂದ ಇತರ ಭಾಷೆಗೆ ಅನುವಾದ ಆಗಿರುವುದೇ ಹೆಚ್ಚು.

ಅಂತರ್ಜಾಲದ ಅನುವಾದವನ್ನು ಊಟಕೆ ಉಪ್ಪಿನ ಕಾಯಿಯಂತೆ ಬಳಸಬಹುದೇ ಹೊರತು, ಊಟದ ಒಂದು ಅಂಶದಂತಲ್ಲಾ.

ಈ ಎಲ್ಲಾ ತೊಡಕುಗಳನು ದಾಟಿ ಸಹೃದಯತೆಯಿಂದ ಒಂದು ಭಾಷೆಯ ಉತ್ಕೃಷ್ಟ  ಸಾಹಿತ್ಯವನ್ನೋ ಅಥವಾ ಬಹಳ ಹಿಂದೆ ರಚಿತವಾಗಿ  ಯಾರ ಗಮನಕ್ಕೂ ಬಾರದ ಚಂದದ ಕೃತಿಗಳನ್ನು ಅನುವಾದಿಸುವಾಗ ಬರುವ ತೊಡಕು ಕೃತಿಯ “ಕಾಪಿ ರೈಟ್ “ಸಮಸ್ಯೆ.

ಇಲ್ಲಿ ವ್ಯವಹಾರ ಚತುರತೆ ಬೇಕಾಗುತ್ತದೆ. ಬರಹಗಾರರಿಗಿಂತ ಪ್ರಕಾಶಕರ ಪಾತ್ರ ಹಿರಿದಾಗುತ್ತದೆ.

ಲಾಭದ ದೃಷ್ಟಿಯಿಂದ ಸೀಮಿತ ಮಾರುಕಟ್ಟೆ ಇರುವ ಭಾಷೆಗೆ ಅನುವಾದಿತ ಕೃತಿಯನ್ನು ಹೊರರಲು ಪ್ರಕಾಶಕರು ದೊರೆಯುವುದಿಲ್ಲ, ದೊರೆತರೂ ಬಹಳ ಪ್ರಸಿದ್ದ ಸಾಹಿತಿಗಳ ಕೃತಿಗಳಾದರೆ, ಈಗಾಗಲೇ ಅನುವಾದದಲಿ ಹೆಸರು ಮಾಡಿದ ಬರಹಗಾರರಾದರೆ ಮಾತ್ರ ಮುಂದೆ ಬರುತ್ತಾರೆ. ಇಲ್ಲಿ ಬರಹಗಾರರ ಆಯ್ಕೆ  ಸ್ವಾತಂತ್ರಕ್ಕೂ ದಕ್ಕೆ ಬರುತ್ತದೆ.

ಕೆಲವು ಪ್ರಕಾಶಕರು ಕತೆ ಕಾದಂಬರಿ ಅನುವಾದ ಪ್ರಕಟಿಸಲು ತೋರುವಷ್ಟು ಆಸಕ್ತಿ ಕವಿತೆ ಕವನದ ಮೇಲೆ ತೋರರು.

ಅನವಾದದ ಮೇಲೆ ಮೋಹವಿರುವವರು ತಮ್ಮ ಇಷ್ಟದ ಕೃತಿ ಅನುವಾದಿಸಿ ಸಕಾಲ ಬರುವವರೆಗೆ ಕಾಯಬೇಕು. ಆಗ ಪ್ರಕಾಶಕರು ದೊರೆತರೆ, ನನಗೆ ತಿಳಿದಂತೆ ಮೂಲ ಪ್ರಕಟವಾಗಿ 60 ವರ್ಷ ತುಂಬಿದ್ದರೆ ಲೇಖಕರ ಅನುಮತಿ ಬೇಕಿಲ್ಲವೆನ್ನುತ್ತಾರೆ. ಸಾಹಿತಿಗಳೆಲ್ಲಾ ಸಹೃದಯರೆಂಬ ಭಾವನೆ ಇರುವುದರಿಂದ (ಕಲಹ ಪ್ರಿಯರೂ ಅಲ್ಲವಾದ್ದರಿಂದ) ಸೌಜನ್ಯಕ್ಕೆ ಮೂಲ ಲೇಖಕರಿಗೆ ತಿಳಿಸುವುದು ಉತ್ತಮ.

ಇತ್ತೀಚಿನ ಕೃತಿಯಾದರೆ ಪ್ರಕಾಶಕರಿಗೆ ತಿಳಿಸಿ ಓಪ್ಪಿಗೆ ಪಡೆಯಬೇಕು.

ಪ್ರಸಿದ್ಧ ಲೇಖಕರ ಬಿಡಿಬರಹವೋ, ಒಂದೆರಡು ಕವಿತೆ ಕವನ ವಾದರೆ, ಮೂಲ ಲೇಖಕರಿಗೆ ತಿಳಿಸುವ ಪ್ರಮಾಣಿಕ ಪ್ರಯತ್ನ ಮಾಡಬೇಕು. ತಪ್ಪಿದಲ್ಲಿ  ಮೂಲ ಲೇಖಕರ ಹೆಸರನ್ನು ನಮೂದಿಸಿ ಅನುವಾದ ಎಂದು ನಮೂದಿಸಿ ತಮ್ಮ ಹೆಸರು ಹಾಕಿ ಪ್ರಕಟಿಸಿದರೆ ಮಹಾಪರಾಧ ಆಗದು. ಮುಂದೆ ತಗಾದೆ ತೆಗೆದರೂ,

ನಮಗೆ ಯಾವ ದುರುದ್ಧೇಶ ಇರಲಿಲ್ಲವೆಂದೂ ಅದರಿಂದ ಲಾಭ ಗಳಿಸಿಲ್ಲವೆಂದೂ, ಅವರ ಗಮನಕ್ಕೆ ತರಲು ಮಾಡಿದ ಪ್ರಾಮಾಣಿಕ ಯತ್ನದ ಬಗ್ಗೆ ವಿವರಿಸಬಹುದು.

ಅನುವಾದದಿಂದ ಹಣರೂಪದಲಿ ಲಾಭ ಬಂದಿದ್ದರೆ ತಪ್ಪಾಗುತ್ತದೆ.

 ಅನುವಾದಿಸುವ ಕ್ರಮ;

ಅನುವಾದಿತರಿಗೆ ಮೂಲ ಕೃತಿಯ ಭಾಷೆ ಮತ್ತು ಅನುವಾದ ಮಾಡಲಿರುವ ಭಾಷೆ ಎರಡರ ಮೇಲೆ ಪ್ರಭುತ್ವವಿದ್ದರೆ ಒಳ್ಳೆಯದು.ಕನಿಷ್ಠ ಎರಡೂ ಬಾಷೆಯನು ಸುಲಲಿತವಾಗಿ ಮಾತನಾಡುವಷ್ಟಾದರೂ ಇರಲೇಬೇಕು.

ಅನುವಾದ ಮಾಡಲಿರುವ ಕೃತಿಯನು ಹತ್ತಾರು ಬಾರಿ ಓದಿ ತಿರಳಿನ ಅರ್ಥವನ್ನು ಸಂಪೂರ್ಣ ತಿಳಿದು ಮನನ ಮಾಡಬೇಕು.

ಪದ ದಿಂದ ಪದಕ್ಕೆ ಅರ್ಥ ಬರೆಯುವುದರಿಂದ ಒಳ ತಿರುಳು ಅಭಿವ್ಯಕ್ತವಾಗದೆ ಇರುವ ಸಾಧ್ಯತೆ ಉಂಟು. ಹಾಗಾಗಿ ವಾಕ್ಯ ರಚನೆ ಬಹಳ ಉದ್ದವಾಗದೆ ಸರಳ ಸಣ್ಣವಾಕ್ಯದಲ್ಲಿ ಭಾವಾನುವಾದವನ್ನು ಮಾಡಬಹುದು.

ನೇರತರ್ಜಿಮೆ ಬಹಳ ಚೆನ್ನ, ಯಾವುದೊ ಭಾಷೆಯದು ಇನ್ನೊಂದು ಭಾಷೆಗೆ ಅನುವಾಗಿರುವುದನು ಆಧಾರವಾಗಿರಿಸಿ ಮತ್ತೂಂದು ಬಾಷೆಗೆ ಅನುವಾದಿಸಿದಾಗ, ಮೂಲ ಕೃತಿಯ ಅರ್ಥ/ ಆಶಯಗಳಿಗೆ ಧಕ್ಕೆಯಾಗದಂತೆ ಎಚ್ಚರವಹಿಸ ಬೇಕು.

ಸಾಕಷ್ಟು ಬಾರಿ ಓದಿ ಹಲವಾರುಬಾರಿ ತಿದ್ದುಪಡಿ ಮಾಡುವುದು ಮೂಲ ಕೃತಿಗೆ ಗೌರವ ತೋರಿದಂತೆ.

ಸಮಾನ ಮನಸ್ಕರು, ಸಮಕಾಲೀನ ಬರಹಗಾರ ಸ್ನೇಹಿತರ ಸೂಚನೆ ಸಲಹೆಗಳನು ಪಡೆಯಬೇಕು

ಅಧಿಕೃತ ನಿಘಂಟುಗಳನು ಹೊಂದಿ ಅದನು ಅಭ್ಯಸಿಸಿ ಸೂಕ್ತಪದಗಳ ಆಯ್ದು ಅನುವಾದಿಸುವುದು ಒಳಿತು.

ಈ ಗಾಗಲೇ ಆ ಕೃತಿ ಅನುವಾದ ಆಗಿದ್ದರೆ ,ಅದನು ಓದಿ ,ಖಚಿತವಾಗಿ ಅದು ಅಪೂರ್ಣ ಎನಿಸಿ ,ತಾವು ಅದಕಿಂತಲೂ ಉತ್ತಮವಾಗಿ ಮೂಲ ಕೃತಿಯನ್ನು ಅಭಿವ್ಯಕ್ತಿಸಬಲ್ಲಿರಾದರೆ ಮಾತ್ರ ಅನುವಾದಕೆ ಕೈ ಹಾಕಬೇಕು.ಇಲ್ಲಿ ಸ್ವಪ್ರತಿಷ್ಠೆ, ಹಿರಿಮೆಗಳು ಕೆಲಸಕ್ಕೆ ಬಾರದು.

ಪ್ರಖ್ಯಾತ Scroll ಅಂಕಣದ ಸಲಹಾ ಸಂಪಾದಕ, ಅಶೋಕ ವಿಶ್ವವಿದ್ಯಾನಿಲಯದ ಫ್ರೋಫೆಸರ್ ಆದ, ಹೆಸರಾಂತ ಅನುವಾದಕ “ಅರುಣವ ಸಿನ್ಹ” ಅವರು ಹೇಳುವಂತೆ,ಅನುವಾದವೆಂದರೆ “ಪ್ರಜಾಪ್ರಭುತ್ವದ ಭಾಷೆ” ಎನ್ನುತ್ತಾರೆ. ಭಾರತದ ವಿವಿಧತೆಯಲಿ ಏಕತೆ ಸೂತ್ರಕ್ಕೆ ಸಹಕಾರಿ ಎನ್ನುತ್ತಾರೆ.

ಹಿರಿಯನಾಗರೀಕರಾದ ಇವರಿಗೆ ಆನುವಾದದ ಸೆಳತ ಎಷ್ಟರಮಟ್ಟಿಗೆ ಎಂದರೆ ! ನಡೆಯುವಾಗ, ಪಯಣಿಸುವಾಗ, ಟಿ.ವಿ ನೋಡುತ್ತಾ ಇತರೆ ಕಾರ್ಯ ಚಟುವಟಿಕೆಯಲ್ಲೂ ಅನುವಾದ ಕ್ರಿಯೆಯಲಿ ತೊಡಗುತ್ತಾರಂತೆ. ಅದರಲೂ ಕವಿತೆ/ಕವನದ ಅನುವಾದದ ಹಂದರ ನಡೆಯುವಾಗ. ರೂಪುಗೊಳ್ಳುವುದಂತೆ.

ಇಂತಹ ಅಮೂಲ್ಯವಾದ ಕ್ರಿಯೆಯ ಮೇಲಿನ ಶ್ರಮವನ್ನೂ ಅನರ್ಹ ಕೃತಿಗಳ ಮೇಲೆ ಹೂಡಬಾರದೆಂದೂ ಎಚ್ಚರಿಸುತ್ತಾರೆ.

ಸಕಲ ಬರಹಗಾರರೂ ಒಂದು ಅಮೂಲ್ಯ ಕೃತಿಯನ್ನು ಅನುವಾದಿಸಿ ಭಾರತದ ಏಕತೆಗೆ ಸಹಕರಿಸೋಣ.


ಬಾಗೇಪಲ್ಲಿ

.

One thought on “

Leave a Reply

Back To Top