ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಮಂದಗಮನ ಈ ಜೀವನ

ಅನಿತಾ

ಹೀಗಿರಲಿಲ್ಲ ನನ್ನಯ ಬಾಲ್ಯ
ಶಾಲೆ ಆರಂಭವೇ ಸೂರ್ಯನು
ನೆತ್ತಿಗೇರುತ್ತಿದ್ದ ಹೊತ್ತು!

ಮುಳುಗುವ ದಿನಕರನು ಅದೆಷ್ಟು ನಿಧಾನ
ಹಸು ,ಕರುಗಳು ಮನೆಯೆಡೆಗೆ
ಧಾವಿಸಿ ಬಂದ ಮೇಲಷ್ಟೇ ಅವನ ಪಯಣ!

ಊಟ-ಉಪಚಾರಕೂ ಸಹನೆಯ ಹೊದಿಕೆ
ಆಟ-ಪಾಠಗಳಿಗಿರಿದ ಹೆದರಿಕೆ
ಅತಿಥಿ ಆಗಮನಕಿರಲಿಲ್ಲ ಕೊರತೆ
ಅಡುಗೆ ಮನೆಯಲಿ ನಿತ್ಯ
ರಸದೌತಣದ ಕೋರಿಕೆ!

ಧಾವಂತದ ಬದುಕು,
ಬೆಳಕು ಸರಿಸಿ ಕತ್ತಲೆಡೆಗೆ ದೂಡುತಿದೆ
ಅಶಾಂತಿಯೆಂಬ ಪರದೆ ಹಿಂದಿನ ಮುಸುಕು!

ಹಗಲಿನಿಂದ ಸರಿರಾತ್ರಿವರೆಗೂ ಸವೆದ ಜೀವ
ಆರ್ಭಟದಲಿ ಒಗ್ಗಿದೆ ಮೂಡಿಸಿ, ಅರಿಯದಂತೆ ಬಾಳಲಿ ಬಿರುಕು!

ಬದಲಾಗಲಿ ಬಾಳಿನ ಓಟದ ಪಥ
ಕರುಣೆ-ಮಮಕಾರ ತುಂಬಲಿ
ಪ್ರತಿ ಜೀವಿಯ ಕಣಕಣದಲಿ
ನೀಡುತಾ ಮನಸಿಗೆ ಹಿತ!


ಅನಿತಾ

One thought on “

Leave a Reply

Back To Top