ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಕೇಳಿ ನೋಡು…

ದೇವಿ ಬಳಗಾನೂರು

r

ಈ ಖಾಲಿಬೆಂಚನ್ನೊಮ್ಮೆ ಕೇಳು ಈ ಏಕಾಂತಕ್ಕೆ ಜೊತೆಯಾಗಿದ್ದು ಯಾರೆಂದು ಅಲ್ಲಿರುವ ನೀರವ ಮೌನವನ್ನೊಮ್ಮೆ ಮಾತಾಡಿಸು ಮಾತಿಲ್ಲದೆಯೇ ಸಮಾಧಾನಿಸಿದ್ದು ಯಾರೆಂದು ಇಳಿಸಂಜೆ ಸುರಿದ ಮಳೆಯನ್ನೊಮ್ಮೆ ಭೇಟಿಯಾಗು ಈ ಕಣ್ಣೀರನ್ನು ಮರೆ ಮಾಡಿದ್ದು ಯಾರೆಂದು…

ನಿನ್ನಿಂದ ಇದೆಲ್ಲಾ ಆಗಲ್ಲ ಬಿಡು ಯಾಕಂದ್ರೆ ನೀನು ಏಕಾಂಗಿಯಲ್ಲ ದುಖಿಃಯಲ್ಲ ನಿನಗೆ ಸಮಾಧಾನದ ಅವಶ್ಯಕತೆಯೇ ಇಲ್ಲ ಆದರೆ ನಾನು ನಿನ್ನಂತಲ್ಲ ನಾನು ಜಗದ ಅತಿ ಪರಮ ಏಕಾಂಗಿ ನನ್ನೀ ಏಕಾಂತಕ್ಕೆ ಜೊತೆ ನೀಡಿದ ನಿನ್ನ ನೆನಪುಗಳಿಗೆ ನಾನು ಋಣಿ ನೀರವ ಮೌನದೊಡನೆ ಮೌನವಾಗಿಯೇ ಮಾತನಾಡಲು ಕಲಿಸಿದ  ನಿನ್ನ ಪ್ರೀತಿಗೆ ಮಳೆಯೊಡನೆ ಅತ್ತು ಹಗುರಾಗುವ ಕಲೆ ತಿಳಿಸಿಕೊಟ್ಟ ಈ ಬದುಕಿಗೆ ನಾ ಆಭಾರಿ….

ನೋಡು ನೀ ಇಲ್ಲದೆ ನನ್ನದೆನೂ ಇಲ್ಲವೇನೋ ಈ ಏಕಾಂತ ಮೌನ ಅಳು ನಗು ಋಷಿ ಹೀಗೆ ನನ್ನೆಲ್ಲವೂ ನಿನ್ನೊಡನೆಯೇ ಆದರೂ ನೀ ಮಾತ್ರ ಜೊತೆಗಿಲ್ಲ ಎಲ್ಲೋ ಓದಿದ ನೆನಪು “ಕಾಯುವುದೇ ಪ್ರೀತಿಯೆಂದರೆ ನೀ ಎಂದಿಗೂ ಬರುವುದೇ ಬೇಡ” ಯಾಕಂದ್ರೆ ಪ್ರೀತಿಯಿಲ್ಲದೇ ನನಗೆ ಬದುಕುವುದು ತಿಳಿದಿಲ್ಲ ಸದಾ ಕಾಯುವೆ ನಾ ಆ ರಾಧೆಯಂತೆ ನಿನ್ನ ನೆನಪಿಗೆಂದಿಗೂ ಸಾವಿಲ್ಲ ಅದು ಸದಾ ಜೀವಂತ, ನನ್ನ ಏಕಾಂತದಂತೆ ಮೌನದೊಡನೆಯ ಮಾತಿನಂತೆ ಮಳೆಯೊಡನೆಯ ಅಳುವಿನಂತೆ…

ನಂಗೆ ಈ ಪ್ರೀತಿಯೊಂದೆ ಬದುಕು ಬವಣೆ ಎಲ್ಲಾ…..


ದೇವಿ ಬಳಗಾನೂರು

One thought on “

  1. ಸೂಪ್ಪರ್ ಅಮಾ ಅಕ್ಷರಗಳೆ ಬಿಂಬಿಸುತ್ತಿವೆ ನಿನ್ನ ವೇದನೆಯನ್ನು ಕಲಿಯುಗದ ರಾಧೆ

Leave a Reply

Back To Top