ಅನುವಾದಿತ ಕವಿತೆ-ಮಲಯಾಳಂ ಮೂಲ

ಅನುವಾದ ಸಂಗಾತಿ

ವಿಧವೆ….!

ಮಲಯಾಳಂ ಮೂಲ: ಸುನಿಲ್

ಕನ್ನಡಕ್ಕೆ: ಐಗೂರು ಮೋಹನ್ ದಾಸ್, ಜಿ.

ಕೆಟ್ಟ ಘಳಿಗೆಯಲ್ಲಿ
ಒಂದು ತುಂಡು ಹಗ್ಗದಲ್ಲಿ
ಒಂದು ಜೀವ ನೇತಾಡಿದಾಗ…..
ಬದುಕಿನ ಮಧ್ಯಭಾಗದಲ್ಲಿಯೇ
ತುಂಡಾಗಿ ಹೋದದ್ದು
ಒಂದು ತಾಳಿ…!

ಒತ್ತಿ ಹೋದ ಕಣ್ಣುಗಳಲ್ಲಿ
ಜೀವನ ಇರುವಾಗಲೂ
ನೀನು ನೀಡುತ್ತಿದ್ದ ನೋವು
ಉಕ್ಕಿ ಹರಿದದ್ದು
ಅಂದು ಮಾತ್ರವಾಗಿತ್ತು…!

‘ವಿಧಿ’ಯನ್ನು
ಶಾಪಿಸಿ ಮನೆಯಿಂದ
ಹೊರ ನಡೆಯುತ್ತಿದ್ದ ಮಂದಿಗೆ
ಮುಂದಿನ ದಿನಗಳ ‘ಹಸಿವು’
ಕಣ್ಣುಗಳಿಗೆ ಕಾಣಲೇ ಇಲ್ಲ….!

ಬಾಕಿ ಉಳಿಸಿರುವ
ಸಂತೋಷಗಳನ್ನು ನೆನೆದು
ಹರಿಯುತ್ತಿರುವ ಕಣ್ಣೀರನ್ನು
ಕೈಗಳಿಂದ ಒರೆಸುತ್ತಾ
ನೆನಪುಗಳಲ್ಲಿಯೇ ಬದುಕುತ್ತಿದ್ದಾಳೆ
ಅವಳು…!!!


One thought on “ಅನುವಾದಿತ ಕವಿತೆ-ಮಲಯಾಳಂ ಮೂಲ

Leave a Reply

Back To Top