ಕಥಾಭರಣ-ಕಥಾಸಂಕಲನ

ಪುಸ್ತಕಸಂಗಾತಿ

ಕಥಾಭರಣ-ಕಥಾಸಂಕಲನ

ಕಥಾಭರಣ- ವಿಭಿನ್ನ ಭಾವಗಳ ಹೂರಣ

ಕನ್ನಡದ 28 ಲೇಖಕರು ಬರೆದಿರುವ, ಡಾ.ಅಜಿತ್ ಹರೀಶಿ ಮತ್ತು ವಿಠಲ್ ಶೆಣೈಯವರು ಸಂಪಾದಿಸಿರುವ ವಿಭಿನ್ನ ಕಥೆಗಳ ಸಂಕಲನ ‘ಕಥಾಭರಣ- ವಿಭಿನ್ನ ಭಾವಗಳ ಹೂರಣ’,

ಕನ್ನಡದ 28 ಲೇಖಕರು ಬರೆದಿರುವ, ಡಾ.ಅಜಿತ್ ಹರೀಶಿ ಮತ್ತು ವಿಠಲ್ ಶೆಣೈಯವರು ಸಂಪಾದಿಸಿರುವ ವಿಭಿನ್ನ ಕಥೆಗಳ ಸಂಕಲನ ಕಥಾಭರಣ- ವಿಭಿನ್ನ ಭಾವಗಳ ಹೂರಣ’, ಶ್ರೀಮತಿ ವಸಂತ ಕಲ್ ಬಾಗಲ್ ರವರು ಬರೆದಿರುವ ‘Some ದರ್ಶನ’ ಮತ್ತು ‘ಅಡ್ಡಿತುಷ ಬಕ್ಕಜಬನ್ನಿ’ ಕೃತಿಗಳು ನಿನ್ನೆ ಭಾನುವಾರ ದಿನಾಂಕ 16 ಅಕ್ಟೋಬರ್ ರಂದು ಬೆಂಗಳೂರಿನ ಅಕ್ಕ ಮಹಾದೇವಿ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ಲೋಕಾರ್ಪಣೆಯಾಯಿತು. ಈ ಮೂರು ಪುಸ್ತಕಗಳನ್ನು ಸಾಹಿತ್ಯಲೋಕ ಪಬ್ಲಿಕೇಷನ್ಸ್ ಪ್ರಕಟಿಸಿದೆ. ಸಮಾರಂಭದ ಮುಖ್ಯ ಅತಿಥಿಯಾಗಿ ಕ್ಯಾಪ್ಟನ್ ಗೋಪಿನಾಥ್ ರವರು ಉಪಸ್ಥಿತರಿದ್ದರು, ಅಧ್ಯಕ್ಷತೆಯನ್ನು ಸಾಹಿತಿ ಶ್ರೀ ಅಲಕಾ ತೀರ್ಥಹಳ್ಳಿಯವರು ವಹಿಸಿದರು. ಕತೆಗಾರ್ತಿ ಶ್ರೀಮತಿ ಆಶಾ ಜಗದೀಶ್ ರವರು ಕಾರ್ಯಕ್ರಮದ ನಿರೂಪಣೆ ಮಾಡಿದರು.

‘ಕಥಾಭರಣ’ ಕೃತಿಯ ಪರಿಚಯವನ್ನು ಯುವ ಲೇಖಕಿ ಶ್ರೀಮತಿ ಪೂರ್ಣಿಮಾ ಮಾಳಗಿಮನಿ ಯವರು ಮಾಡಿಕೊಟ್ಟರು. ಇಪ್ಪತ್ತೆಂಟು ವಿವಿಧ ಕಥೆಗಳನ್ನು ಒಂದು ಭೋಜನದ ರುಚಿಕರ ಭಕ್ಷ್ಯಗಳಂತೆ ಹೋಲಿಸಿ, ಕಥಾಸಂಕಲನದಲ್ಲಿರುವ ವೈವಿಧ್ಯತೆಯನ್ನು ಹೇಳಿದರು. ‘some ದರ್ಶನ’ ಮತ್ತು ‘ಅಡ್ಡಿತುಷ ಬಕ್ಕಜಬನ್ನಿ’ ಕೃತಿಗಳ ಪರಿಚಯವನ್ನು ಸಾಹಿತಿ ಶ್ರೀ ಅಗ್ರಹಾರ ಕೃಷ್ಣಮೂರ್ತಿಯವರು ಕೊಟ್ಟರು. ಕಥಾಭರಣ ಕೃತಿಯ ಹಿಂದಿನ ಪ್ರಯಾಣವನ್ನು ಉಪ ಸಂಪಾದಕ ಶ್ರೀ ವಿಠಲ್ ಶೆಣೈಯವರು ವರ್ಣಿಸಿದರೆ, some ದರ್ಶನ ಮತ್ತು ಅಡ್ಡಿತುಷ ಬಕ್ಕಜಬನ್ನಿ ಕೃತಿಗಳ ಹಿಂದಿನ ಕೆಲವು ಸನ್ನಿವೇಶಗಳನ್ನು ಕೃತಿಗಳ ಲೇಖಕಿ ಶ್ರೀಮತಿ ವಸಂತ ಕಲ್ ಬಾಗಲ್ ರವರು ಹಂಚಿದರು. ಕ್ಯಾಪ್ಟನ್ ಗೋಪಿನಾಥ್ ರವರು ಪ್ರತಿಯೊಬ್ಬರ ಜೀವನದಲ್ಲಿ ಪರಿಶ್ರಮ, ಛಲ ಮತ್ತು ಸಾಹಸಗೈಯುವ ವಿಷಯಗಳ ಕುರಿತು ಸಭೆಯಲ್ಲಿ ಮಾತನಾಡಿದರು. ಶ್ರೀ ಅಲಕಾ ತೀರ್ಥಹಳ್ಳಿಯವರು ಚುಟುಕಾಗಿ ಪುಸ್ತಕಗಳ ಬಗ್ಗೆ ಮತ್ತು ಸಾಹಿತ್ಯಕ್ಷೇತ್ರದ ಬಗ್ಗೆ ಮಾತನಾಡಿದರು. ಸಾಹಿತ್ಯಲೋಕ ಪಬ್ಲಿಕೇಷನ್ಸ್ ನ ಶ್ರೀ ರಘುವೀರ್ ಸಮರ್ಥ್ ರವರು ತಮ್ಮ ಪ್ರಕಾಶನ ಸಂಸ್ಥೆ ಹೊಸ ಕಥೆಗಾರರು ಮತ್ತು ಸಾಹಿತಿಗಳನ್ನು ಪ್ರೋತ್ಸಾಹಿಸುವ ಕುರಿತು ಮಾತನಾಡಿದರು. ಕೊನೆಯಲ್ಲಿ ಯುವಸಾಹಿತಿ ಶ್ರೀ ಅನಂತ್ ಕುಣಿಗಲ್ ರವರು ವಂದನಾರ್ಪಣೆ ಮಾಡಿದರು.

ಕಥಾಭರಣ’, ‘some ದರ್ಶನ’, ‘ಅಡ್ಡಿತುಷ ಬಕ್ಕಜಬನ್ನಿ’ ಕೃತಿಗಳು ರಾಜ್ಯದ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ದೊರಕುವುದಲ್ಲದೇ ಮೊ: 99459 39436 ಗೆ ಸಂಪರ್ಕಿಸಿ, ಕೊಳ್ಳಬಹುದು. https://sahithyalokapublications.myinstamojo.com/ ಮೂಲಕ ಆನ್ಲೈನ್ ನಲ್ಲಿ ಸಹ ಕೊಳ್ಳಬಹುದು.


ಡಾ.ಅಜಿತ್ ಹರೀಶಿ

Leave a Reply

Back To Top