ಮರ್ಲಿನ್ ಮನ್ರೋರವರ ಕವಿತೆಯ ಅನುವಾದ

ಅನುವಾದ ಸಂಗಾತಿ

ಜೀವನ

ಮರ್ಲಿನ್ ಮನ್ರೋ
(01 ಜೂನ್ 1926 – 04 ಆಗಸ್ಟ್‌ 1962)
ಇವರು ಪ್ರಖ್ಯಾತ ಹಾಲಿವುಡ್ ಅಮೇರಿನ್ ನಟಿ ಮತ್ತು ಗಾಯಕಿಯಾಗಿಯೇ ಜಗಕ್ಕೆ ಪರಿಚಿತರು. 01 ಜೂನ್ 1926ರಂದು ಲಾಸ್ ಏಂಜಲೀಸ್ ನಗರದಲ್ಲಿ ಜನಿಸಿದರು. ‘ನಾರ್ಮಾ ಜೀನ್ ಮಾರ್ಟೆನ್ಸನ್’ ಇವರ ನಿಜವಾದ ಹೆಸರು. ಸಿನಿಮಾ ರಂಗಕ್ಕೆ ಬರುವ ಮೊದಲು ವೈಮಾನಿಕ ಸಂಸ್ಥೆಯಲ್ಲಿ ಕೆಲಸ ಮತ್ತು ರೂಪದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ. ಇವರು ಕವಯತ್ರಿಯೂ ಕೂಡ. ಚಿಕ್ಕ ವಯಸ್ಸಿನಲ್ಲೇ ಮನೆಯ ಆರ್ಥಿಕ ನಿರ್ವಹಣೆಯ ಹೊಣೆ, ಪ್ರೀತಿ ಅನಾದರಗಳಿಂದಾಗಿ ಮದ್ಯಪಾನ, ಮಾದಕ ದ್ರವ್ಯಗಳಿಗೆ ದಾಸರಾದರು. 04 ಆಗಸ್ಟ್ 1962ರಂದು 36 ವರ್ಷಗಳಾಗಿದ್ದಾಗ ತಮ್ಮ ಮನೆಯಲ್ಲಿ ಅತಿಯಾದ ಮಾದಕ ದ್ರವ್ಯಗಳ ಸೇವನೆಯಿಂದಾಗಿ ಮರಣಿಸಿದರು. ಪ್ರೇಮ ವೈಫಲ್ಯ, ರಾಜಕೀಯ ಕುತಂತ್ರಗಳು ಇವರನ್ನು ಬಲಿ ಪಡೆದವು.
ಮೈ ಸ್ಟೋರಿ, ಫ್ರಾಗ್ಮೆಂಟ್ಸ್, ಮರ್ಲಿನ್ ಮನ್ರೋ ಇನ್ ಹರ್ ಓನ್ ವರ್ಡ್ಸ್, ಕನ್ವರ್ಸೇಷನ್ಸ್ ವಿತ್ ಮರ್ಲಿನ್, ಮೈ ಸೆಕ್ಸ್ ಇಸ್ ಐಸ್ ಕ್ರೀಮ್-ದಿ ಮರ್ಲಿನ್, ಮಾರ್ಲಿನ್ ಮನ್ರೋ ಸಾಂಗ್ ಬುಕ್ ಇವು ಇವರು ಬರೆದ ಪುಸ್ತಕಗಳು
.

ಜೀವನ

ಜೀವನವೇ…
ನಾನು ನಿನಗೆ ಎರಡೂ ಕಡೆಗಳಲ್ಲಿರುವೆ
ಯಾಕೆಂದರೆ…
ನೀನು ಏಕವಚನವಲ್ಲ; ಬಹುವಚನ
ನೀನು ಎಲ್ಲಾ ಕಡೆಗಳಲ್ಲೂ ಇರುವೆ
ನನ್ನನ್ನು ನೋಡು ಎಲ್ಲಿರುವೆನೋ?
ನಿನಗೆ ಒಂದು ಕಡೆ ಮಾತ್ರವೇ ಇರುವೆ
ಶೀತಲವಾದ ಘನೀಕೃತ ಮಂಜಿನಂತೆ
ಗಾಳಿಯಲಿ ಬಳ್ಳಿಗಳಂತೆ ಬೆಸೆದುಕೊಂಡು
ಚಲನವಿಲ್ಲದೆ ಧೃಡವಾದ ಮಂಜಿನ ಗೂಡಿನಂತೆ
ಕೆಳಕ್ಕೆ ತೂಗಾಡುತ್ತ…
ಹೇಗೋ ಹಾಗೆ ಶಿಥಿಲವಾದಂತೆ
ಉಳಿದುಹೋಗಿ ಬದುಕುತ್ತಿದ್ದೇನೆ
ಆದರೆ…
ಆ ಮಂಜಿನ ಮೇಲೆ ಮಿನುಗುವ ಮಣಿಯಂತಹ
ಕಿರಣಗಳಿಗೆ ಎಷ್ಟು ಬಣ್ಣಗಳಿವೆಯೆಂದು?
ನಾನು ಎಷ್ಟೋ ಚಿತ್ರಗಳಲ್ಲಿ ನೋಡಿದೆ
ಆ ಭಿನ್ನವಾದ ವರ್ಣಗಳನು!
ವಿಚಿತ್ರವಾದ ವಿಷಯವೇನೆಂದರೆ…
ಒಂದು ಬಿಳುಪು ಬಣ್ಣದಲ್ಲಿ ಮಾತ್ರವೇ ನೀನಿಲ್ಲ
ಓಹೋ! ಜೀವನವೇ…
ನಿನ್ನನ್ನು ವ್ಯಾಖ್ಯಾನಿಸಿದವರಾರೋ
ನಿನ್ನನ್ನು ಮೋಸಮಾಡಿದ್ದಾರೆ ಸುಮ!
ಹಾಗೆ ಇನ್ನೊಂದು ವಿಷಯ…
ಒಮ್ಮೆ ನೀನು ಮಂಜಿನ ಗೂಡುಗಳನು ಮೀರಿ
ತೆಳುವಾದ ಗೋಡೆಯಂತೆ ಅಂಟಿಕೊಂಡು
ಇನ್ನೊಮ್ಮೆ…
ಓ ಜೀವನವೇ..‌. ಆ ನೀನೇ
ವೇಗವಾಗಿ ಬೀಸುವ ಗಾಳಿಯಲ್ಲೂ ಬಲವಾಗಿ ನಿಲ್ಲುತ್ತ
ಇನ್ನೆಷ್ಟೋ ಸಲ ಸುಟ್ಟುಹಾಕುವ ಕಿಡಿಗಳ ಮೇಲೆ ಕೂಡ ಧುಮುಕುವ
ನೀನೇನಾದರೂ ಶೀತಲವಾಗಿ ಮಾತ್ರವೇ ಇರುವೆಯೇನು?
ಇಲ್ಲ…
ಅಗ್ನಿಕೀಲಗಳಂತೆ ಭಗಭಗ ದಹನವಾಗುತ
ಮನುಷ್ಯರನು ಮೈಯೆಲ್ಲಾ ಸುಡುತ್ತಿರುವಂತೆಯೂ ಇರುವೆ
ಒಮ್ಮೆ ತಣ್ಣಗೆ…
ಇನ್ನೊಮ್ಮೆ ಬಿಸಿಯಾಗಿ…
ಜೀವನವೇ…
ನೀನೇನು ಏಕವಚನವಲ್ಲ ಸುಮ!

ಆದರೆ…
ಕೆಲವೊಮ್ಮೆ ಅನಿಸುತ್ತದೆ
ನಾನು ನಿನಗೆ ಒಂದು ಕಡೆಯೇ ಅಲ್ಲ
ಎರಡೂ ದಿಕ್ಕುಗಳಲ್ಲೂ ಇರುವೆ
ಮೇಲಕ್ಕೂ ಹಾರಬೇಕೆಂದುಕೊಳ್ಳುವೆ
ಆದರೆ…
ಯಾಕೋ ಹೆಚ್ಚು ಸಲ ಕೆಳಗಡೆಗೇ
ಪಾತಾಳಕ್ಕೇ ನೇತಾಡುತ್ತ ಜಾರಿಹೋಗುತ್ತಿರುತ್ತೇನೆ
ಯಾಕೆಂದರೆ… ಓ ಜೀವನವೇ…
ನನ್ನನು ನೀನು ಎರಡೂ ಕಡೆಗಳಿಂದಲೂ
ಮೇಲಕ್ಕೂ ಕೆಳಕ್ಕೂ ಎಳೆಯುತ್ತಲೇ ಇರುವೆ
ಹೆಚ್ಚಾಗಿ ಕೆಳಕ್ಕೇ…!

ಆಂಗ್ಲ ಮೂಲ : ಮರ್ಲಿನ್ ಮನ್ರೋ
ತೆಲುಗು ಅನುವಾದ : ಗೀತಾಂಜಲಿ (ಡಾ|| ಭಾರತಿ)
ಕನ್ನಡ ಅನುವಾದ : ಧನಪಾಲ ನಾಗರಾಜಪ್ಪ

ಮರ್ಲಿನ್ ಮನ್ರೋ
(01 ಜೂನ್ 1926 – 04 ಆಗಸ್ಟ್‌ 1962
)

ಇವರು ಪ್ರಖ್ಯಾತ ಹಾಲಿವುಡ್ ಅಮೇರಿನ್ ನಟಿ ಮತ್ತು ಗಾಯಕಿಯಾಗಿಯೇ ಜಗಕ್ಕೆ ಪರಿಚಿತರು. 01 ಜೂನ್ 1926ರಂದು ಲಾಸ್ ಏಂಜಲೀಸ್ ನಗರದಲ್ಲಿ ಜನಿಸಿದರು. ‘ನಾರ್ಮಾ ಜೀನ್ ಮಾರ್ಟೆನ್ಸನ್’ ಇವರ ನಿಜವಾದ ಹೆಸರು. ಸಿನಿಮಾ ರಂಗಕ್ಕೆ ಬರುವ ಮೊದಲು ವೈಮಾನಿಕ ಸಂಸ್ಥೆಯಲ್ಲಿ ಕೆಲಸ ಮತ್ತು ರೂಪದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ. ಇವರು ಕವಯತ್ರಿಯೂ ಕೂಡ. ಚಿಕ್ಕ ವಯಸ್ಸಿನಲ್ಲೇ ಮನೆಯ ಆರ್ಥಿಕ ನಿರ್ವಹಣೆಯ ಹೊಣೆ, ಪ್ರೀತಿ ಅನಾದರಗಳಿಂದಾಗಿ ಮದ್ಯಪಾನ, ಮಾದಕ ದ್ರವ್ಯಗಳಿಗೆ ದಾಸರಾದರು. 04 ಆಗಸ್ಟ್ 1962ರಂದು 36 ವರ್ಷಗಳಾಗಿದ್ದಾಗ ತಮ್ಮ ಮನೆಯಲ್ಲಿ ಅತಿಯಾದ ಮಾದಕ ದ್ರವ್ಯಗಳ ಸೇವನೆಯಿಂದಾಗಿ ಮರಣಿಸಿದರು. ಪ್ರೇಮ ವೈಫಲ್ಯ, ರಾಜಕೀಯ ಕುತಂತ್ರಗಳು ಇವರನ್ನು ಬಲಿ ಪಡೆದವು.
ಮೈ ಸ್ಟೋರಿ, ಫ್ರಾಗ್ಮೆಂಟ್ಸ್, ಮರ್ಲಿನ್ ಮನ್ರೋ ಇನ್ ಹರ್ ಓನ್ ವರ್ಡ್ಸ್, ಕನ್ವರ್ಸೇಷನ್ಸ್ ವಿತ್ ಮರ್ಲಿನ್, ಮೈ ಸೆಕ್ಸ್ ಇಸ್ ಐಸ್ ಕ್ರೀಮ್-ದಿ ಮರ್ಲಿನ್, ಮಾರ್ಲಿನ್ ಮನ್ರೋ ಸಾಂಗ್ ಬುಕ್ ಇವು ಇವರು ಬರೆದ ಪುಸ್ತಕಗಳು.

One thought on “ಮರ್ಲಿನ್ ಮನ್ರೋರವರ ಕವಿತೆಯ ಅನುವಾದ

Leave a Reply

Back To Top