ಸೌ. ಸವಿತಾ ಇನಾಮದಾರ್ ರವರ ಕವಿತೆ-ಪ್ರೀತಿಯ ಹೊಂಬೆಳಕು

ಕಾವ್ಯ ಸಂಗಾತಿ

ಪ್ರೀತಿಯ ಹೊಂಬೆಳಕು

ಸೌ. ಸವಿತಾ ಇನಾಮದಾರ್

ಎನ್ನ ಕವನದ ಸಾಲುಗಳಲಿ
ನಿನ್ನ ಬಣ್ಣಿಸ ಬಲ್ಲೆನು
ಎನ್ನ ಸ್ವರದ ಮೋಡಿಯಲ್ಲಿ
ನಿನ್ನ ಬಂಧಿಸ ಬಲ್ಲೆನು…..

ಸುತ್ತ ಮುತ್ತಲು ಕತ್ತಲೆ ಕವಿದರು
ನಿನ್ನ ಸ್ವರವೊಂದೇ ಸಾಕು
ನೀನು ಮೀಟಿದೆ ಪ್ರೆಮ ಪಲ್ಲವಿ
ಹಬ್ಬಿತು ಪ್ರೀತಿಯ ಹೊಂಬೆಳಕು….

ಎನ್ನ ರೆಪ್ಪೆಗಳನ್ನು ಗೆಯಲ್ಲಿ ಬೆಚ್ಚಗೆ ನೀನು ಕುಳಿತಿರುವೆ…
ಕಣ್ಣು ತೆರೆದುರೆ ಓಡಿ ಹೋದರೆ
ಎಂದು ನಾನು ಅಂಜುವೆ….

ನೀಲಿ ನಭದ ಅರಮನೆಯಲ್ಲಿ
ನಿನಗಾಗಿ ಕಾದಿರುವೆ
ಕಂಗೊಳಿಸಿದವು ನಲ್ಲ ನೀಡಿದ
ರಂಗಿನೋಕುಳಿಯಾ ಒಡವೆ…

ಎನ್ನ ಹೃದಯ ಮಂದಿರದಲ್ಲಿ
ನಿನ್ನ ಪೂಜಿಸುವ ಆಸೆ
ಪ್ರತಿ ಜನ್ಮಕೂ ಕೊಡು ನೀ ಎನಗೆ ಬಾಹು ಬಂಧನದಾ ಭಾಷೆ…


Leave a Reply

Back To Top