ರತ್ನರಾಯಮಲ್ಲ-ಗಜಲ್

ಕಾವ್ಯ ಸಂಗಾತಿ

ಗಜಲ್

ರತ್ನರಾಯಮಲ್ಲ

ನಾನು ಹೋದರೆ ನನ್ನನು ನೆನೆಯುವೆಯಾ ಹೇಳು 
ನನ್ನ ಗೋರಿ ಮೇಲೆ ಹೂವು ನೆಡುವೆಯಾ ಹೇಳು 

ನನ್ನ ಗೆಲುವಿಗಾಗಿ ಹಗಲಿರುಳು ಹಂಬಲಿಸುತಿರುವೆ 
ಉತ್ಸಾಹದ ಚಿಲುಮೆಯನು ತುಂಬುವೆಯಾ ಹೇಳು 

ಕನಸುಗಳನು ನನಗಾಗಿ ಸಿಂಗರಿಸಿರುವೆ ಬಲ್ಲೆ ನಾನು 
ಸೋತು ಸುಣ್ಣವಾದರೆ ನನ್ನ ಸಹಿಸುವೆಯಾ ಹೇಳು 

ಮುನಿಸಿಕೊಂಡಾಗಲೆಲ್ಲ ಪ್ರೀತಿಯ ಸುಮ ಬೀರುವೆ 
ನಿನ್ನ ಸಂತೈಸಲು ರುಬರು ಆಗಿ ಸಿಗುವೆಯಾ ಹೇಳು 

ನಿನ್ನ ಮುದ್ದುಮರಿ ಮುಂದೆ ಮಾತಿನ ಮಲ್ಲಿ ನೀನು  
ಉಸಿರು ಚೆಲ್ಲಲು ಮಡಿಲು ನೀಡುವೆಯಾ ಹೇಳು


Leave a Reply

Back To Top