ಲೇಖನ
ಅನುವಾದದ ಬಗ್ಗೆ
ಬಾಗೇಪಲ್ಲಿ ಕೃಷ್ಣಮೂರ್ತಿ.
ಅನುವಾದಿಸುವ ಕಲೆಯನ್ನು ಅಭ್ಯಸಿಸುವ ಯತ್ನದಲಿ ಕೈಗೆ ಸಿಕ್ಕ ಎಲ್ಲಾ ಇಂಗ್ಲಿಷ್ ಪದ್ಯಗಳನು ಕನ್ನಡೀಕರಣ ಮಾಡುವ ಪ್ರಾರಂಭಿಕ ಹಂತದಲಿ, ಈ ಕೆಳಗಿನ ಋತ್. ಹೆಚ್. ಹಾಪ್ಕಿನ್ ಎಂಬ ಅಮೇರಿಕದ ಸ್ಥಳೀಯ ಬುಡಕಟ್ಟಿನ ಉಪ ಸಂಸ್ಕೃತಿ ಡಕೋಟಾ/ಲಕೋಟಾ ಸಿಯೋಕ್ಸ್ ಪಂಗಡದ ಬರಹಗಾರ್ತಿ ಪದ್ಯವನ್ನು ತರ್ಜಿಮೆ ಮಾಡಿದ್ದು ,ಇಂದು ಪುನಃ ಅದು ನನ್ನ ಗಮನ ಸೆಳೆಯಿತು.
ತಿದ್ದುಪಡಿ ಮಾಡ ಯತ್ನಿಸಹೋದರೆ! ಅದು ಆಗ ಗೊಡಿಸದೆ “ನಾನು ಹೀಗೇ ಸರಿಯಿರುವೆ ವೃಥಾಯತ್ನ ಮಾಡಬೇಡ” ಎಂದಂತಾಯ್ತು.ಯಥಾವತ್ತಾಗಿ ತಮ್ಮಗಳ ಅವಗಾಹನೆಗೆ ನೀಡಿರುವೆ. ಅಗತ್ಯವಿದ್ದಲ್ಲಿ ಬದಲಾವಣೆ ಸೂಚಿಸಿ ಆಕೆಗೆ ಇನ್ನೊಮ್ಮೆ ಹೇಳಿನೋಡುವ
ವಸುಧೆ
ವಸಂಧರೆಯನು
ಮೊಟ್ಟ ಮೊದಲ ದೇಸೀಯ ಹೆಣ್ಣೆಂದು
ಹೇಳುವರು.
ಹೇಳಿ ಕೇಳಿ,
ಆಕೆ ನಮ್ಮೆಲ್ಲರಿಗೆ ಮೂಲ ಬದುಕನಿತ್ತವಳು
ನಮ್ಮ ಶುದ್ಧ ನೀರೇ ಆಕೆಯ ಕಡು ಮೈ ರಕ್ತ
ಹರಿಯುತಿದೆ ಅದೆಷ್ಟೋ ನರನಾಡಿಗಳಲಿ
ನದಿ ಹೊಳೆ ತೊರೆಗಳಂತೆ ನಮ್ಮ
ಸಂರಕ್ಷಣೆಗಾಗಿ
ನಮ್ಮ ಹುಟ್ಟು ಇರುವಿಕೆಗಳೆಲ್ಲಾ ಒಂದೇ ತೆರದಿ
ಒಂದಕೊಂದು ಬೆಸೆದಿದೆ ಸಂಬಂಧದಲಿ
ನಾವು ಇಳೆ ನಭಗಳ ಧೂಳ ಕಣದಂತೆ ಆಕೆಯ
ಅವಿಭಾಜ್ಯ ಅಂಗ.
ಆಕೆಯದು ಪವಿತ್ರ ಹೆಣ್ತನ,
ಆಕೆ ಸೃಷ್ಟಿಕರ್ತೆ, ಮಾತೃಮೂರ್ತಿ
ಮೂಲ:ಋತ್ ಹೆಚ್ ಹಾಪ್ಕಿನ್
ಅನು ; ಬಾಗೇಪಲ್ಲಿ ಕೃಷ್ಣಮೂರ್ತಿ.
——————————————-
ತುಂಬಾ ಚೆನ್ನಾಗಿದೆ ಸರ್
ಸುಂದರ ಅನುವಾದ.