ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ-ಅವರಂತಾಗಲೇ ?

ಕಾವ್ಯ ಸಂಗಾತಿ

ಅವರಂತಾಗಲೇ ?

ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ

ಕಬಂಧ ಬಾಹುಗಳ ಆಚೆ ಈಚೆಯ
ನನ್ನ ತುಮುಲುಗಳೊಳಗೆ
ಹೆಣೆದುಕೊಂಡು ನನ್ನೊಳಗೆ ಪ್ರಶ್ನಿಸುತ್ತಿದ್ದೇನೆ ಅವರಂತಾಗಲೇ?

ರಾಮನ ಸ್ಪರ್ಶಕ್ಕೆ ಶಿಲೆ ಬಲೆ ಹರಿದುದಷ್ಟೇ
ಹದಿಬದೆಯಾದರೂ ಅಹಲ್ಯೆ ಹೆಣ್ಣಾಗಲಿಲ್ಲ.

ಸತ್ಯಕ್ಕಾಗಿ ಸಂತೆಯಲ್ಲಿ ಬಿಕರಿ ಗೊಂಡರೂ ಚಂದ್ರಮತಿಯ ಅಸ್ಮಿತೆ ಮಣ್ಣಾಗಲಿಲ್ಲ.

ಅಗಸನ ಮಾತಿಗೆ ರಾಮನ ನೀತಿಗೆ ಅಗ್ನಿ
ಪ್ರವೇಶಿಸಿದರು ಸೀತೆ ಬೂದಿಯಾಗಲಿಲ್ಲ.

ಜೂಜಿನ ಸರಕಾಗಿ ಸೀರೆ ಸೇಳಿಸಿಕೊಂಡರು ಮಾನಿನಿಯಾದ ದ್ರೌಪತಿ ಕರಗಿ ನೀರಾಗಲಿಲ್ಲ.

ಕಣ್ಣಪಟ್ಟಿಯ ಒಳಗೂ ಸಾವಿರದ ಬೆಳಕು ಕಂಡ ಮಹಾಸಾಧ್ವಿ ಗಾಂಧಾರಿ ಕುರುಡಿಯಾಗಲಿಲ್ಲ.

ಪುರಾಣಗಳ ಸಾವಿತ್ರಿ, ತಾರಾ, ಭಾನು, ದಮಯಂತಿ ಇವರಂತೆ ಬೂದಿ, ಮಣ್ಣು ,ನೀರಾಗಿ ಹರಿಯ ಬೇಕಿಲ್ಲ.

ನಾನು ನನ್ನೊಳಗಿನ ಹೆಣ್ತನದ ಒಟ್ಟು ಮೊತ್ತ
ನನಗೋ ಬರಿ ಮಾನವಳಾಗುವ ತವಕ.

ಒಂದೊಮ್ಮೆ ಕಥೆ ಆಗದಿದ್ದರೆ
ಇತಿಹಾಸ, ಪುರಾಣ, ಚರಿತ್ರೆಯಾಗುವದಂತೂ ಬೇಡ. ನಾನು ಮಾನವ್ಯದ ಬೀಜವಾದರೂ ಸಾಕು.


5 thoughts on “ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ-ಅವರಂತಾಗಲೇ ?

  1. To the CORE Madam.ಅಂತಸತ್ವವನ್ನು ಮುಟ್ಟಿ ಕೊನೆಗೆ ಮಾನ್ಯ ಸಿದ್ದಯ್ಯ ಪುರಾಣಿಕರು ಹೇಳಿದಂತೆ…….ಏನಾದರೂ ಆಗು,ಮೊದಲು ಮಾನವನಾಗು ಎಂಬ ಆಶಯವನ್ನು ಈಡೇರಿಸುವಾಸೆ ಸ್ತುತ್ಯಾರ್ಹ.

Leave a Reply

Back To Top