ಹನಿಬಿಂದು-ನಮ್ಮ ಆಲೋಚನೆಗಳು ಉದಾತ್ತವಾಗಿರಲಿ

ಚಿಂತನೆ

ನಮ್ಮ ಆಲೋಚನೆಗಳು ಉದಾತ್ತವಾಗಿರಲಿ

ಹನಿಬಿಂದು

.

ಅದೇ ನಮ್ಮ ನೆಮ್ಮದಿಯನ್ನು ಭಂಗ ಮಾಡಿ, ನಮ್ಮೊಳಗೇ ಅವಿತು, ನಮ್ಮನ್ನು ಅರಿತು ನಮ್ಮ ಬದುಕಿನಲ್ಲಿ ನಮಗೆ ನೋವು ಕೊಡುವ ಅವಿತವರು ಬೇರೆ ಪರರು ಯಾರೂ ಅಲ್ಲ. ನಮ್ಮವರೇ ಮತ್ತು ನಮ್ಮ ಆಲೋಚನೆಗಳೇ. ನಾವು ಉದಾತ್ತ ಆಲೋಚನೆಗಳನ್ನು ಹೊಂದಲು ಸಾಧ್ಯ ಆಗೋದು ನಮ್ಮ ಮನೆಯಲ್ಲಿ ಅಥವಾ ಪಿಜಿ, ಹಾಸ್ಟೆಲ್, ರೂಮ್ ಹೀಗೆ ನಮ್ಮ ಜೊತೆ ನಮ್ಮದೇ ಕೊನೆಯಲ್ಲಿ ಅಥವಾ ಅಕ್ಕ ಪಕ್ಕದಲ್ಲಿ ನಮ್ಮೊಡನೆ ಸದಾ ಯಾರು ಇರುತ್ತಾರೆಯೋ ಅವರ ಜೊತೆಗಿನ ಸನಿಹ ಮತ್ತು ಮಾತುಗಳು ನಮ್ಮ ಬದುಕಿನ ಉಲ್ಲಾಸ ಹೆಚ್ಚಿಸಬೇಕು. ಸಂತಸ ತರಬೇಕು ಅಲ್ಲವೇ?

ಬದುಕಿನಲ್ಲಿ ನಮ್ಮೊಡನೆ ಜೊತೆಯಾಗಿ ಇರುವವರ ಭಾವಗಳಿಗೆ ನಮ್ಮ ಭಾವಗಳು ಮತ್ತು ಬಾಳು ಹೊಂದಾಣಿಕೆ ಆಗಬೇಕು. ಆಗ ಸಂತಸದ ಜೀವನ. ಅವರ ಗುಣ, ಪ್ರೀತಿ, ಮಾತು, ಆಲೋಚನೆ, ಮನೋಭಾವ ಚೆನ್ನಾಗಿದ್ದರೆ ನಮಗೂ ಟೆನ್ಶನ್ ಇರದೆ ನಾವು ಉತ್ತಮ ಬದುಕನ್ನು ನಿರ್ವಹಿಸಬಹುದು. ಇಲ್ಲದೇ ಹೋದರೆ ಅವರ ಟೆನ್ಶನ್ ನಮಗೂ ಬಂದು ನಾವು ಕುಸಿದು ಬಿಡುತ್ತೇವೆ.

ಭಾವನೆಗಳು ನಮ್ಮನ್ನು ಆಳುತ್ತವೆ. ಯಾರು ಏನೇ ಮಾಡಿದರೂ ನಮ್ಮ ಉದಾತ್ತ ಭಾವನೆ ಬದಲಾಗದೆ ಇದ್ದರೆ ನಾವು ಉತ್ತಮರು. ಅದೇ ಪರರಿಗೆ, ಅವರ ಆಲೋಚನೆಗಳಿಗೆ ತಕ್ಕಂತೆ ನಾವು ಬದಲಾಗುತ್ತಾ ಹೋದರೆ ನಮ್ಮನ್ನು ಪರರು ಕೆಲಸದ ಆಳಿನ ಹಾಗೆ ನೋಡುತ್ತಾರೆ. ಸ್ವಲ್ಪ ಹಿತ ಮಿತವಾದ  ಸ್ವಾರ್ಥ, ಸ್ವಂತಿಕೆ, ಧೃಢ ಆಲೋಚನೆ ಯೋಜನೆ ಮನದಲ್ಲಿ ಯಾವಾಗಲೂ ಇರಬೇಕು. ಯಾರನ್ನೂ ಪೂರ್ತಿಯಾಗಿ 100% ನಂಬ ಬಾರದು. ಏಕೆಂದರೆ ಅವರು ಇನ್ನೊಬ್ಬರನ್ನು ನಂಬಿರುತ್ತಾರೆ. ಅವರಿಂದ ನಾವು ನಂಬಿದವರು ತೊಂದರೆಗೆ ಒಳಗಾದರೂ ನೋವು ಪಡುವವರು ನಾವೇ. ಉದಾಹರಣೆಗೆ ಮಡದಿ ಗಂಡನನ್ನು ನಂಬಿರುತ್ತಾಳೆ. ಅವನನ್ನೇ ಆಶ್ರಯಿಸಿಕೊಂಡು ಇರುತ್ತಾಳೆ. ಅವನ ಕೆಲಸದ ಸ್ಥಳದಲ್ಲಿ ಏನೋ ತೊಂದರೆ ಆಗಿ ಎರಡು ತಿಂಗಳ ಕಾಲ ಸಂಬಳ ಸಿಗಲಿಲ್ಲ ಅಂದುಕೊಳ್ಳಿ. ಅದರ ಪರಿಣಾಮ ನೇರವಾಗಿ ಮಡದಿಯ ಮೇಲೆಯೇ ಅಲ್ಲವೇ? ಅದೇ ಅವಳು ಗಂಡನ ಹಾಗೆಯೇ ಹೊರಗೆ ದುಡಿದರೆ ಗಂಡನಿಗೆ ತೊಂದರೆ ಆದ ಸಮಯದಲ್ಲಿ ತಾನು ಹೆಗಲುಕೊಟ್ಟು ಅದನ್ನು ಸರಿಪಡಿಸಿ ಸಂಸಾರ ನಡೆಸಬಹುದು.

ಹಲವಾರು ಕುಟುಂಬಗಳನ್ನು ನೋಡಿರುವೆ. ಗಂಡ ಹೊರಗೆ ಕೆಲಸ ಮಾಡಿ ಮಡದಿ ಮಕ್ಕಳಿಗೆ ತಾನೇ ಪ್ರತಿ ಬೇಕುಗಳನ್ನು ತಂದು ಹಾಕುತ್ತಿರುತ್ತಾರೆ. ಒಂದು ದಿನ ಗಂಡನಿಗೆ ಏನೋ ಆಯಿತು. ಸ್ವಾಸ್ಥ್ಯ ತೊಂದರೆಯೋ..ಇತ್ಯಾದಿ. ಅವನನ್ನು ಡಾಕ್ಟರ್ ಬಳಿ ಕರೆದುಕೊಂಡು ಹೋಗಿ ಔಷಧ ಕೊಡಿಸಲು ಕೂಡಾ ಮಡದಿ ಮaಕ್ಕಳಿಗೆ ಗೊತ್ತಿರುವುದಿಲ್ಲ. ಪ್ರತಿಯೊಂದು ಘಟನೆಗೆ ಎಲ್ಲರೂ ತಯಾರಾಗಿ ಇರಬೇಕು ಎಂದಾದರೆ ಪ್ರತಿಯೊಬ್ಬರಿಗೆ ಸ್ವಾತಂತ್ರ್ಯ ಇರಬೇಕು. ಮಡದಿ ನೋಡಲು ಸುಂದರವಾಗಿ ಇದ್ದಾಳೆ ಹೊರಗೆ ಹೋದರೆ ಅವಳಿಗೆ ಬೇರೆ ಗಂಡಸರು ಕಣ್ಣು ಹಾಕಿ ಅವಳನ್ನು ಹಾಳು ಮಾಡುತ್ತಾರೆ ಎಂಬ ಭಯದಿಂದ ಕೆಲವು ಕಲಿತ ಗಂಡಸರೇ ತಮ್ಮ ಕಲಿತ ಮಡದಿಯನ್ನು ಮನೆ ಕೆಲಸದಾಕೆಯ ಹಾಗೆ ಮನೆಯೊಳಗೆ ಕೂಡಿ ಹಾಕಿ ಇಟ್ಟವರನ್ನು ನೋಡಿರುವೆ. ಅವಳಿಗಿಂತ ಅಂದವಾಗಿ ಇರುವ ಮಹಿಳೆಯರು ಸೇಫ್ ಆಗಿ ಹೊರಗೆ ದುಡಿಯುತ್ತಿದ್ದಾರೆ ಎಂಬ ಸತ್ಯ ಆ ಮನುಷ್ಯರಿಗೆ ತಿಳಿಯದು. ಭ್ರಮೆ, ಸಣ್ಣ ಸಣ್ಣ ಕೆಟ್ಟ ಆಲೋಚನೆಗಳು, ದುರಾಸೆ ಮದ, ಅತಿ ಸ್ವಾರ್ಥ, ಅಪನಂಬಿಕೆ, ಸಂಶಯ, ಹತಾಶೆ, ಬಡತನ, ಸಾಧಿಸಲು ಹಿಂದೆ ಬಿದ್ದ ಕ್ಷಣ, ಹೀಯಾಳಿಸುವುದು, ತುಚ್ಛವಾಗಿ ಕಾಣುವುದು, ಹೆದರಿಸುವುದು, ನೀನು ಏನೂ ಇಲ್ಲ ನಿನ್ನಿಂದ ಏನೂ ಆಗದು ಎಂಬ ಹಾಗೆ ಮಾತನಾಡಿ ಹಿಂದೆಯೇ ಇರುವ ಹಾಗೆ ಮಾಡುವುದು ಇಂಥದೆಲ್ಲ ಬದುಕಲ್ಲಿ ನಮಗೆ ನೋವು ತರುವ ಅಂಶಗಳಾಗಿವೆ.

ಏನೂ ಆಲೋಚನೆ ಮಾಡದೆ, ಹಿಂದೆ ಮುಂದೆ ನೋಡದೆ ನುಗ್ಗಿ ಬಿಡಬೇಕು ಕೆಲಸಕ್ಕೆ. ಯಾವುದೇ ಕ್ಷೇತ್ರದಲ್ಲಿ ಮುಂದೆ ಬರಬೇಕಾದರೆ ನಾ ಸಾಧಿಸಿಯೇ ತೀರುವೆ ಎಂಬ ಹುಚ್ಚು ಕೆಚ್ಚಿರಬೇಕು. ಇಲ್ಲದೇ ಇದ್ದರೆ ಸಾಧ್ಯವಿಲ್ಲ. ಸಾಧನೆಗೆ ಹಟವೂ ಒಳ್ಳೆಯದೇ. ನೋವುಂಡವನ ಹಠ ಹೆಚ್ಚಾಗಿ ಅವನು ಬೇಗ ಸಾಧಕನಾಗುವನು.

ನಮ್ಮ ಭಾವನೆಗಳಿಗೆ ಪ್ರಮೋಷನ್ ಕೊಡೋಣ. ನಮ್ಮೊಡನೆ ಇರುವವರ ಚಿಕ್ಕ ಪುಟ್ಟ ತಪ್ಪುಗಳನ್ನು ಕ್ಷಮಿಸಿ, ಸಾಧ್ಯವಾಗದೆ ಇದ್ದರೆ ನಮ್ಮಷ್ಟಕ್ಕೆ ನಾವೇ ಬದುಕಿ ಸಾಧನೆ ಮಾಡಿ ತೋರಿಸಿ ಬಿಡೋಣ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಈ ಜಾಗದಲ್ಲಿ. ಕಷ್ಟ ಪಟ್ಟವನಿಗೆ ಸುಖ ಇದೆ. ಪ್ರಾಕ್ಟೀಸ್ ಮಾಡಿದವನಿಗೆ ಹೋಲ್ಡ್ ಇದೆ. ಇದ್ದೆ ಇರುತ್ತದೆ ಅಲ್ಲವೇ? ಬಡತನ ಏನನ್ನು ಬೇಕಾದರೂ ಕಲಿಸುತ್ತದೆ. ಒಳ್ಳೆಯದನ್ನು ಕಲಿಯೋಣ. ಕೆಟ್ಟದರ ಕಡೆಗೆ ಸರ್ವ ಕಡೆಯೂ ವಾಲದೆ ಇರೋಣ ಅಲ್ಲವೇ?

ಒಟ್ಟಿನಲ್ಲಿ ಉದಾತ್ತ ಆಲೋಚನೆಗಳು ಇದ್ದಲ್ಲಿ ಬದುಕು ಬೆಳಗುತ್ತದೆ. ಮನ ಮನಸ್ಸುಗಳು ಬೆಳಗುತ್ತವೆ. ಯಾವುದೂ ಕಷ್ಟ ಅನಿಸದು. ಜೊತೆಗೆ, ಜೊತೆಗಿರುವ ವ್ಯಕ್ತಿಗಳ ನಡೆ ನುಡಿ ಗುಣ ಚೆನ್ನಾಗಿ ಇರಬೇಕು. ಇಲ್ಲದೇ ಹೋದರೆ ಮನುಷ್ಯರನ್ನು ಬಿಟ್ಟು ಚಾರ್ಲಿ ಹಾಗಿನ ನಾಯಿ ಸಾಕುವುದು ಮೇಲು. ನೀವೇನಂತೀರಿ?


Leave a Reply

Back To Top