ಪರೀಕ್ಷೆ-ಡಾ.ದಾನಮ್ಮ ಝಳಕಿಯವರ ಕವಿತೆ

ಕಾವ್ಯ ಸಂಗಾತಿ

ಪರೀಕ್ಷೆ

ಡಾ.ದಾನಮ್ಮ ಝಳಕಿ

ಹೆಣ್ಣು ಜನ್ಮಕೆ
ನೂರಾರು ಪರೀಕ್ಷೆ
ಬ್ರೂಣದಲಿ
ಲಿಂಗಪರೀಕ್ಷೆ
ಹುಟ್ಟುತಲೇ
ಅಂಗಾಂಗ
ಪರೀಕ್ಷೆ
ಬೆಳೆಯುತಲಿ
ಜನರ ಪರೀಕ್ಷೆ
ಶಾಲೆಯಲಿ
ಶಿಕ್ಷಕರ ಪರೀಕ್ಷೆ
ನೌಕರಿಯಲಿ
ಪ್ರಾರಂಭಿಕ
ಪರೀಕ್ಷೆ
ಮದುವೆಗೆ
ವಧುಪರೀಕ್ಷೆ
ದಿನಕ್ಕೊಂದು
ಕ್ಷಣಕ್ಕೊಂದು
ಪರೀಕ್ಷೆ
ಫಲಿತಾಂಶ
ಬಾರದ ಪರೀಕ್ಷೆ
ಕ್ಷಣಕ್ಷಣಕ್ಕೆ
ದೂಡುವವು
ಪರೀಕ್ಷೆಗಳ
ನಿರೀಕ್ಷೆಯಲಿ


One thought on “ಪರೀಕ್ಷೆ-ಡಾ.ದಾನಮ್ಮ ಝಳಕಿಯವರ ಕವಿತೆ

  1. ಬರೀ ಪರೀಕ್ಷೆಯಲ್ಲ, ದಾನಮ್ಮ ಮೇಡಂ… ಹೆಣ್ಣುಜನ್ಮಕ್ಕೆ, ಚಣ ಚಣವೂವೂ ” ಸತ್ವ ಪರೀಕ್ಷೆ” ತುಂಬಾ ಅರ್ಥಪೂರ್ಣ ನಿಮ್ಮ ಕವಿತೆ.
    — ಪ್ರಭುರಾಜ ಅರಣಕಲ್

Leave a Reply

Back To Top