ಕಾವ್ಯಸಂಗಾತಿ
ಗಜಲ್
ಶಂಕರಾನಂದ ಹೆಬ್ಬಾಳ

ಬಡತನದ ಕುಲುಮ್ಯಾಗ ಬೆಂದೋರು ನಾವು
ಕಟಕ ರೊಟ್ಟಿ ಕೆಂಪಚಟ್ನಿ ತಿಂದೋರು ನಾವು
ಮೂರು ಕಾಸಿಗಿ ಕೈಯೊಡ್ಡಿ ನಿಂತಿವ್ಯಾಕ
ಮಾತಿಗೊಮ್ಮೆ ದೇವ್ರನ್ನ ಬೈದೋರು ನಾವು
ನೆತ್ತಿಸುಡತಿದ್ರೂ ತಂಪಾಗಿ ಇರತೀವಿ ನೋಡ
ಉಟ್ಟ ಬಟ್ಟ್ಯಾಗ ಊರ ಬಿಟ್ಟೋರು ನಾವು
ಮಕ್ಕಳನ್ನ ಸಾಲಿಕಲಿಸೋ ಆಸೆ ಇಟ್ಕೊಂಡಿವಿ
ನಮ್ಮ ಕಷ್ಟ ನಮಗಿರ್ಲೆಂತ ಅಂದೋರು ನಾವು
ಅಭಿನವನ ಪದಾನ ನಮಗೆಲ್ಲ ದಾರಿದೀಪ
ಸಾವುತನ ದುಡಕೋಂತ ಇರೋರು ನಾವು
ಚಿತ್ರಕ್ಕೆ ತಕ್ಕ ಗಝಲ್…….ನೋವು, ನಲಿವು ಎಲ್ಲವೂ ಇದೆ….
ಚಂದ