ಸಾರ್ಥಕತೆ- ಅನಿತಾರವರ ಕವಿತೆ

ಕಾವ್ಯ ಸಂಗಾತಿ

ಸಾರ್ಥಕತೆ

ಅನಿತಾ

ಒಮ್ಮೆ ಚಿಗುರೊಡೆಯಬೇಕು
ಮೊಳಕೆಯೊಡೆವ ಕಾಳಾಗಿ
ಮನುಜನ ಹಸಿವ
ನೀಗಿಸುವ ತೆನೆಯಾಗಿ!

ಒಮ್ಮೆ ಆಕಾರವಾಗಬೇಕು
ಆಗಸದಿಂದ ಜಾರುವ ಹನಿಯಾಗಿ
ಮಾನವನ ದಾಹ
ಇಂಗಿಸುವ ನೀರಾಗಿ!

ಒಮ್ಮೆ ರೂಪ ತಳಿಬೇಕು
ಸುತ್ತೆಲ್ಲಾ ಚಲಿಸುವ ಗಾಳಿಯಾಗಿ
ಮನುಕುಲವ ಬದುಕಿಸುವ
ಬಾಳಿನ ಆವಿಯಾಗಿ!

ಒಮ್ಮೆ ಅಕ್ಷರವಾಗಬೇಕು
ಭಾವನೆ ತುಂಬುವ ಪದವಾಗಿ
ಜ್ಞಾನದ ಹಸಿವ
ಇಂಗಿಸುವ ನುಡಿಯಾಗಿ!


4 thoughts on “ಸಾರ್ಥಕತೆ- ಅನಿತಾರವರ ಕವಿತೆ

Leave a Reply

Back To Top