ಕಾವ್ಯ ಸಂಗಾತಿ
ಅಬಾಬಿಗಳು
ಹಮೀದಾ ಬೇಗಂ ದೇಸಾಯಿ
1… ಹೆಜ್ಜೆ ಇಟ್ಟಲ್ಲಿ
ಧರ್ಮ ಪಿಶಾಚಿ
ಬೆನ್ನಟ್ಟುತ್ತಿದೆ
ಹಮೀದಾ..
ಊರು ಕೇರಿ ಸ್ಮಶಾನದಂತಾಗಿವೆ..!
2….ಎಲ್ಲರ ಕಣ್ಣ ಮೇಲೆ
ಹಳದಿ ಚಷ್ಮಾ
ಬೀಗಿ ಮೆರೆಯುತಿದೆ
ಹಮೀದಾ…
ಸ್ವಚ್ಛ ನೋಟ ಕಾಣುವುದೆಂದು…!
3…..ಶಾಲೆ ಕಾಲೇಜು
ವಿದ್ಯಾಲಯಗಳಲ್ಲಿ
ಕೈಗೆ ಮಚ್ಚು ಬಂದಿವೆ
ಹಮೀದಾ…
ಜ್ಞಾನದ ಬೆಳಕು ಎಲ್ಲಿ ಹೋಯ್ತು…!
4…. ಹೆಣ್ಣೇನು ಗಂಡೇನು
ಸಮಾನರೆಲ್ಲರು
ಸೃಷ್ಟಿಕರ್ತನಿಗೆ ;
ಹಮೀದಾ..
ಅಸಮಾನರು ಕುಬ್ಜ ಮಾನವನಿಗೆ..!
5…..ಕೊಡಬೇಕಂತೆ ಗೌರವ
ಹಿರಿಯರಾದವರಿಗೆ
ಪೂಜನೀಯರಿಗೆ ;
ಹಮೀದಾ…
ಹುಡುಕಬೇಕಾಗಿದೆ ಅವರನ್ನು…!
ಮೇಡಂ ಐದನೇ ಕವನ ಇಷ್ಟವಾಯಿತು. ಧನ್ಯವಾದಗಳು.
ಮೆಡಮ್ ಅಭಿನಂದನೆ ಅಬಾಬಿ ಬರೆಯುವ ನಿಯಮೇನು ಅದರ ಪರಿಚಯಾತ್ಮಕ ಸಾಲು ತಾವೇ ಬರೆದರೆ ಚಂದ