ಕಾವ್ಯ ಸಂಗಾತಿ
ನೀನೇ!
ಡಾ.ಡೋ ನಾ ವೆಂಕಟೇಶ
“ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವಿರಿ ಕಣ್ಣು ಕಾಣದ
ಗಾವಿಲರೇ”
ಅಂದಿನಿಂದಿನ ತನಕ
ಅಮ್ಮ ಅಕ್ಕ ತಂಗಿ
ನಿಮ್ಮ ಆಸರೆ ಕಂದಿದಂತೆ
ನನ್ನ ಜೀವದ ಗೆಳತಿ ನಿನ್ನಾಣತಿ
ಯಿಲ್ಲದೇ ನನ್ನುಸಿರು ನಿಲ್ಲುತಿ!
ಏನೆಂದು ಕರೆಯಲಿ ಜೀವ
ವೈವಿಧ್ಯ ಕಲೆ
ಗ್ರಹ ಗತಿಗಳ ಚಲನೆ ನಿನ್ನಿಂದ!
ನಿನ್ನಿಂದಲೇ ನನ್ನ ಸ್ಥಿತಿಗತಿಗಳಾನಂದ
ಗೃಹ ವೈಭೋಗದಾನಂದ
ನಿನ್ನಿಂದಲೇ ಚಿನ್ನ
ನಿನ್ನಿಂದಲೇ ಮುತ್ತು ರತ್ನ
ಮತ್ತು ನೀನಿದ್ದರಷ್ಟೇ
ಇದೆಲ್ಲ ಚೆನ್ನ
ಭುಜಿಸುವ ಭಕ್ಷ್ಯ,
ಭಜಿಸುವ ದೇವ ದೇವ
ಗೃಹ ಲಕ್ಷ್ಮಿ
ಭಾಗ್ಯಲಕ್ಷ್ಮಿ
ಸಂತಾನ ಲಕ್ಷ್ಮಿ
ಧಾನ್ಯ ಲಕ್ಷ್ಮಿ
ಧನ ಲಕ್ಷ್ಮಿ ಮುಂತಾಗಿ
ಲಕ್ಷ್ಮೀನಾರಾಯಣನಾಗಿ
ಕಡೆಗೆ ಅನಂತ ಶಯನನಾಗುವ
ತನಕ
ಶಿರಬಾಗಿ ನಮಿಸು ನಿನ್ನ
ಶ್ರೀಲಕ್ಷ್ಮಿಗೆ
ನಿನ್ನಾತ್ಮ ನಿಗೆ
ನಿನ್ನ ಅಂತರಾತ್ಮನಿಗೇ
ನಿನ್ನದೇ ಸ್ವಧರ್ಮಿಣಿಗೆ
ನಮೋ ನಮೋ!
ನಿಮ್ಮ ಮನಸ್ಸಿನಲ್ಲಿ ತುಂಬಿರುವ ಪ್ರೀತಿಯ
ಭಾವನೆಗಳನ್ನು ಸುಂದರವಾಗಿ ಈ ಕವಿತೆಯಲ್ಲಿ
ರೂಪಿಸಿದ್ದೀರಿ.
Yes it’s a gratitude I think one must have towards ಕವಿತಾ(incidentally she is Kavitha venkatesha)
ಕಟ್ಟಿ ಕೊಂಡವಳು ಕೊನೆವರೆಗೆ. ಕೈ ಹಿಡಿದ ಲಕ್ಷ್ಮಿಯ ಕವಿತೆ ಸೂಪರ್.
ಹೌದು ಸೂರ್ಯ. ಜೀವನದ ಸಂಧ್ಯಾಕಾಲದಲ್ಲಿ ಭಾವನೆಗಳು ಬಲವಾಗುತ್ತೆ
ಧನ್ಯವಾದಗಳು surya!
Amma na mele nammappana ishtondu Preeti ❤️ Super
ನಮ್ಮ ಪ್ರೀತಿ ಹತ್ತಿರದಿಂದ ನೋಡಿದ ಮಗಳು
DIMPAMMA!!
It’s true. No words.. for explanation.
Both of you mafe for each other
Thank you and you are one of those who had seen us from near
ಏನು ಹೇಳಿದರೂ ಪದಗಳು ಸಲಲ್ಲ, ನಿಮ್ಮಿಬರ ಪ್ರೀತಿ ಹೀಗೆ ಸದಾ ಕಾಲ ಇರಲಿ. ನೀವಿಬ್ಬರೂ ಬಹಳ ಮಂದಿಗೆ ಅದರ್ಷಜೋಡಿ ಅದರಲ್ಲಿ ನಾನು ಒಬ್ಬಳು, ನಿಮ್ಮ ಹಾಗೆ ಇರುವ ಪ್ರಯತ್ನದಲ್ಲಿ…..❤️
ಧನ್ಯವಾದಗಳು Guddu !