ಭಾಗ್ಯದ ಬೆಳಕು-ಎಚ್ ನಾಗರತ್ನ

ಕಾವ್ಯ ಸಂಗಾತಿ

ಭಾಗ್ಯದ ಬೆಳಕು

ಎಚ್ ನಾಗರತ್ನ

ಅಪ್ಪನ ಮುದ್ದಿನ ಮಗಳಿವಳು
ಸೂರ್ಯನ ಕಾಂತಿಯ ಹೊಳಪುಪಿವಳು.

ನಮ್ಮ ಮನೆಯ ಅಂಗಳದಿ
ಸುಂದರ ರಂಗೋಲಿ ಬಿಡುವವಳು.

ಹಾಲಿ ನನಗೆ ಚೆಲ್ಲುವಳು
ಎಲ್ಲರ ಮನವ ಗೆದ್ದಿಹಳು.

ಅಣ್ಣನ ಅಕ್ಕರೆಯ ಒಲವಿವಳು
ಅಜ್ಜಿಯ ಮೆಚ್ಚಿನ ಮೊಮ್ಮಗಳು.

ನಮ್ಮ ಮನೆಯ ಬೆಳಗುವಳು
ಅಮ್ಮನ ಪ್ರೀತಿಯ ಮಗಳಿವಳು.

ಅಜ್ಜನ ಜೊತೆಗೆ ಸೈಕಲ್ ಸವಾರಿ
ಬಗೆ ಬಗೆ ಉಡುಪು ಉಡುತಿಹಳು.

ಗೆಳೆಯರೊಟ್ಟಿಗೆ ಆಡುವಳು
ಸಂತಸದಿಂದ ನಲಿಯುವಳು.


One thought on “ಭಾಗ್ಯದ ಬೆಳಕು-ಎಚ್ ನಾಗರತ್ನ

Leave a Reply

Back To Top