ಜಯಶ್ರೀ ಭಂಡಾರಿ.-ಗಜಲ್

ಕಾವ್ಯ ಸಂಗಾತಿ

ಗಜಲ್

ಜಯಶ್ರೀ ಭಂಡಾರಿ.

ಚುಚ್ಚಿದ ಮುಳ್ಳಿನ ನೋವನು ಪಕಳೆಯ ಸುಗಂಧ ಮರೆಸಿತಲ್ಲ ಗೆಳೆಯಾ
ಬೆಚ್ಚಿದ ಕಳ್ಳ ಮನವು ನೋಡದೆ ತರಳೆ ದೃಷ್ಟಿಯ ತೆರೆಸಿತಲ್ಲ ಗೆಳೆಯಾ.

ದಾರಿಯು ಸಾಗದೆ ಮರೆತು ಅದೆಲ್ಲಿಂದಲೋ ಬಂದೆಯೇನು.
ದೂರದ ಪಯಣ ನಿಲ್ಲದೆ ನಿನ್ನಡಿಗೆ ಬಂದು ಜರೆಸಿತಲ್ಲ ಗೆಳೆಯಾ.

ಅನುದಿನವೂ ಕಾಯುವ ತವಕ ಹುಚ್ಚು ಹೊಳೆಯಾಗಿದೆ ಕಣೋ.
ಸುದಿನವು  ಬರುವ ನೀರೀಕ್ಷೆಗೆ ತೋರಣದ ಕೆಚ್ಚು ಕರೆಸಿತಲ್ಲ ಗೆಳೆಯಾ.

ಅಂದದಿ ಹಚ್ಚ ಹಸಿರಿನ ವನಸಿರಿಯ ಗಾಳಿ ಬೀಸಿದಾಗ ತಬ್ಬಿದೆ ಏಕೋ.
ಚಂದದಿ ಚಂದ್ರಿಕೆಯ ಮನಸಾರೆ ಬರಸೆಳೆದು ಬಿಗಿಯಾಗಿ ಬೆರೆಸಿತಲ್ಲ ಗೆಳೆಯಾ.

ಅನುರಾಗದ ಅನುಬಂಧದಿ ಜೋಡಿ ಹಕ್ಕಿಗಳು ನಾವು ನೂರು ಜನ್ಮಕೂ
ಅನುಕ್ಷಣವೂ ಒಲವ ಸಾನುರಾಗ ಜಯಳನು ಹಕ್ಕಿನಲಿ  ಅರೆಸಿತಲ್ಲ ಗೆಳೆಯಾ.


One thought on “ಜಯಶ್ರೀ ಭಂಡಾರಿ.-ಗಜಲ್

Leave a Reply

Back To Top