ಸುಲಭಾ ಜೋಶಿ ಹಾವನೂರ ಅವರ- ನೀರಮುತ್ತಿನ  ಹನಿಗಳು.

ಕಾವ್ಯ ಸಂಗಾತಿ

ನೀರಮುತ್ತಿನ  ಹನಿಗಳು.

ಸುಲಭಾ ಜೋಶಿ ಹಾವನೂರ

ನೀರ ಮುತ್ತಿನ ಹನಿಗಳು ಒತ್ತಾಗಿ ಎಲೆ ಮೇಲೆ.
ನನ್ನ ಕಣ್ಣ ಸ್ವತ್ತಾಗಿ ಸೌಂರ್ದಯ ತೆಪ್ಪಾಗಿ ತೇಲುತ್ತಾ
ತೇಲುತ್ತಾ ನಲಿಯುತ್ತ ತೇಲುತ್ತಾ ತೇಲುತ್ತಾ.
ಬದುಕನ್ನು ಬದುಕುತ್ತಾ.
ನೀರಾಗಿ ಹಿಮವಾಗಿ ಉಗಿಯಾಗಿ
.ಮಳೆಯಾಗಿ ನೆಲವೆಲ್ಲ ಹಸಿರಾಗಿ.
ಬಗೆ ಬಗೆಯ ಬೆಳೆಯಾಗಿ.
ಬಾಳನ್ನು ಬೆಳಗುತ್ತ.
ಗೋಳನ್ನು ಮರೆಯುತ್ತ.
ನೀರಮುತ್ತಿನ ಹನಿಗಳು ಒತ್ತಾಗಿ ಎಲೆ ಮೇಲೆ.

ಉದಯಾಸ್ತಮಾನಕ್ಕೆ.
ಕಲ್ಪನೆಯ ನೆಗೆಸುತ್ತಾ ಜೀವನವ ಜೀಕುತ್ತಾ.
ಜೀಕುತ್ತಾ ಜೀಕುತ್ತಾ.
ಹಿಂದೂಮ್ಮೆ ಮುಂದೂಮ್ಮೆ.
ನೆನಪನ್ನು ಕನಸನ್ನು.
ಬಲದಿಂದ ನೆಲವೂತ್ತಿ ನೆಲವೂತ್ತಿ
ಝುಮ್ಮೆಂದು ತುದಿಪಾದ
ಎತ್ತುತಾ ಜೀಕುತ್ತಾ ಎತ್ತುತಾ ಜೀಕುತ್ತಾ.
ನೀರಮುತ್ತಿನ ಹನಿಗಳು ಒತ್ತಾಗಿ ಎಲೆಮೇಲೆ.
ನೀರಮುತ್ತಿನ ಹನಿಗಳು ಒತ್ತಾಗಿ ಎಲೆ ಮೇಲೆ.


Leave a Reply

Back To Top