ಬುಟ್ಟು ಬಿಡಿ ಸಾಕಾಗಿದೆ -ಡಾ.ಸುರೇಖಾ ರಾಠೋಡ್ ಕವಿತೆ

ಕಾವ್ಯ ಸಂಗಾತಿ

ಬುಟ್ಟು ಬಿಡಿ ಸಾಕಾಗಿದೆ

ಡಾ.ಸುರೇಖಾ ರಾಠೋಡ್

ಬಿಟ್ಟು ಬಿಡಿ,
ಗಂಡಸರೇ
ಹೆಣ್ಣುಗಳಿಗೆ ಅವರಿಷ್ಟದಂತೆ
ಬದುಕಲು…

ಮತ್ತೆ ಮತ್ತೆ
ಒತ್ತಿ ಒತ್ತಿ ,
ಹೊರಸಬೆಡಿ
ಧರ್ಮದ ನೂಗವ..
ನಮ್ಮ ಹೆಣ್ಣುಗಳ
ಹೆಗಲ ಮೇಲೆ….

ಸಾರಿ ಹಾಕಿಕೋ..
ಬುರಕಾ ಹಾಕಿಕೋ..
ಹಿಜಾಬ್ ಹಾಕಿಕೋ..
ಹೀಗಿರು ಹಾಗಿರೆಂದು
ನಿಮ್ಮ ಇಷ್ಟದ ಹೆರಿಕೆಯ ಕುರಿಗಳನ್ನಾಸುವದನ್ನು
ಬಿಟ್ಟು ಬಿಡಿ‌
ಸಂಪ್ರದಾಯದ ಸೋಗು ಹಾಕಿಸವರೇ….

ಜಿನ್ಸ್ ಬೇಡ,
ಟಿ – ಶರ್ಟ್ ಬೇಡ,
ಟೈಟ್ ಬಟ್ಟೆ ಬೇಡ..
ಅದು ಬೇಡ ಇದು ಬೇಡ
ಎಂದು ಹೆಣ್ಣುಗಳ ಸ್ವಾತಂತ್ರ್ಯ ಕಸಿದುಕೊಳ್ಳಬೇಡಿ,
ಹೆಣ್ಣುಗಳು ತಮ್ಮ ಇಷ್ಟದಂತೆ
ಬದುಕಲು ಬಿಡಿ..
ಪುರುಷಹಂಕಾರಿಗಳೇ…

ಹೆಣ್ಣುಗಳ ರಕ್ಷಿಸುವ ನೆಪದಲ್ಲಿ
ಹಿಂಸಿಸುತ್ತಿರಾ, ದೌರ್ಜನ್ಯ
ಎಸಗುತ್ತಿರಾ ?

ಸಾಕು ಸಾಕಾಗಿದೆ
ನಿಮ್ಮ ಪರಿಪಾಲಕರಾಗಿ
ಗುಲಾಮರಾಗಿ;
ಸೇವಕರಾಗಿ

ಇನ್ನೂ ಸಹಿಸಲಾಗದು
ಎದ್ದೆಳುವೆವು ಒಬ್ಬೊಬ್ಬರಾಗಿ,
ಗುಂಪುಗಳಲ್ಲಿ
ಎಲ್ಲ ಬಂಧನವ
ತೊಡೆದು …
ಹಾರಲು ರೆಕ್ಕೆಗಳಿಗೆ
ಹೆಣ್ಣುಗಳು ನಾವು
ಸಜ್ಜಾಗಿದ್ದೇವೆ
ಹಳಸಲು ಗೊಡ್ಡು ಸಂಪ್ರದಾಯದ ವಿರುದ್ಧ ಹೋರಾಡಲು !!

———————–


ಡಾ.ಸುರೇಖಾ ರಾಠೋಡ್ .

One thought on “ಬುಟ್ಟು ಬಿಡಿ ಸಾಕಾಗಿದೆ -ಡಾ.ಸುರೇಖಾ ರಾಠೋಡ್ ಕವಿತೆ

  1. ರೆಕ್ಕೆ ಬಿಚ್ಚಿ ಹಾರುವ ಹೂಗಳೇ ನಿಮ್ಮ ತಡೆಯುವುರು ಯಾರಿಲ್ಲ… ಹಾರಿದರೆ ಆಗಸವೆಲ್ಲ ನಿಮ್ಮ ಕೆಳಗೆ… ಕೇಳಿದ್ದು ಗಂಡು ಮನಕೆ ಅರ್ಥವಾಗಿದೆ…

Leave a Reply

Back To Top