ಸಿದ್ದಲಿಂಗಪ್ಪ ಬೀಳಗಿ…ತನಗಗಳು

ಕಾವ್ಯ ಸಂಗಾತಿ

ತನಗಗಳು

ಸಿದ್ದಲಿಂಗಪ್ಪ ಬೀಳಗಿ


ನೀ ಕೊಟ್ಟ ಮುತ್ತುಗಳ
ಇಟ್ಟಿರುವೆ ಜೋಪಾನ
ಆಗಾಗ ಎಣಿಸುತ
ಪಡುವೆ ರೋಮಾಂಚನ

ಅರೆಜ್ಞಾನಿ ಎದುರು
ಅರೆ ಹುಚ್ಚನಂತಿರು
ಜ್ಞಾನಿಗಳ ಸಂಗಡ
ವಾದ ಮಾಡುತಲಿರು

ಮರೆಯಬಹುದು ನೀ
ಅದು ನಿನ್ನ ಖಯಾಲಿ
ಕಳಕೊಂಡ ನನ್ನನು
ನಾ ಹೇಗೆ ಮರಿಯಲಿ

ಹರೆಯ ಉಕ್ಕುವಾಗ
ಅರಿಯದುಪದೇಶ
ಇಳಿ ವಯಸಿನಲಿ
ನೆನಪು ಅವಶೇಷ


Leave a Reply

Back To Top