ಕಾವ್ಯಸಂಗಾತಿ
ರಾಧಾ
ಕು ಶಿ
ಎಂದಿನಂತೆ, ಬೆಂಗಳೂರು ತಲುಪಿದೆ,
ಈ ಪತ್ರ ಬರೆದ ಮೇಲೆ ನಾನು ಕ್ಷೇಮ ಎಂದೇ ನೀನು ಭಾವಿಸಬೇಕಲ್ಲವೆ!
ನಿನ್ನ ಜೊತೆ ಇದ್ದಷ್ಟು ಹೊತ್ತು ಆ ಕಾವೇರಿಯ ಬೋರ್ಗರೆತ ಕೇಳದಷ್ಟು ನಿನ್ನಲ್ಲಿ ಮುಳುಗಿದ್ದೆ, ಇದಕ್ಕಾಗಿ ಇನ್ನೊಮ್ಮೆ ಆ ಮಹಾ ನದಿಯೊಮ್ಮೆ ಅದಕ್ಕೆ ಅಡ್ಡ ಕಟ್ಟಿರುವ ಆ ಡ್ಯಾಮ್ ಅನ್ನು ಇನ್ನೊಮ್ಮೆ ಬಯ್ಯಬೇಕು!
ಇದೆಲ್ಲ ಬರಿ ಭಾವ, ಇದನ್ನು ಕಾವೇರಿ ನದಿ ತೀರದ ಜನರೇನಾದರೂ ಓದಿದರೆ ಅವರ ಕೈಲಿ ಮೆಟ್ಟು ಖಂಡಿತ.
ನೀನವೊತ್ತು ಮಾತನಾಡಿದ್ದು ನನಗಿವತ್ತೂ ನೆನಪಿಲ್ಲ,
ನಿನ್ನ ಸನಿಹದ ಅಫಿಮಿಗೆ ಅಷ್ಟು ತಾಕತ್ತು. ನನಗಿಂತ ಆ ನದಿಯ ಬೋರ್ಗರೆತಕ್ಕೆಚೆನ್ನಾಗಿ ಗೊತ್ತು.
ನಿನ್ನ ಮೇಲಿನ ನನ್ನ ಪ್ರೀತಿಯು ಅದೇ ರಭಸವಲ್ಲವೇ!
ಇನ್ನಾದರೂ ಮಾತಾನಾಡು,
ವಿರಹದ ಉರಿಯ ಇನ್ನೂ ಎಚ್ಚಿಸಬೇಡ
ಕಡೇಪಕ್ಷ ಕಣ್ಣಲ್ಲಿ ಕಣ್ಣಿಟ್ಟು ನಕ್ಕುಬಿಡು.
ಆ ನಗು ಈ ಹಾಳು ರೈಲಿನ ಸದ್ದನು ಕೂಡ ಮರೆಸಬೇಕು, ಹಾಗಿರಬೇಕು ನಿನ್ನ ನಗು, ಅದು ನನ್ನದೇ ನಗು ರಾಧಾ.
ಇನ್ನೊಮ್ಮೆ ದಿಟ್ಟಿಸು ನನ್ನ ಕಣ್ಣನು
ನಕ್ಕುಬಿಡು ಚಿನ್ನ,
ಇಲ್ಲಾ ನಾನು ಅತ್ತುಬಿಡಲೇ… ರಾಧಾ
ನಾ ಕೃಷ್ಣನಲ್ಲ ಅಂದು ಹೇಗೆ ಅಂದುಕೊಂಡೆ
ಪ್ರೀತಿಗೆ ಚಂದ್ರನು ಅರ್ಹನಲ್ಲವೇ!
ನಿನ್ನ ನಲ್ಮೆಯ