ಕಾವ್ಯ ಸಂಗಾತಿ
ಭಾವಗೀತೆ
ದೀಪಿಕಾ ಚಾಟೆ
ಕಣ್ಣಿನಲಿ ಕವನವಿದೆ
ಹಾಡೆಯಾ ಮಾತಾಡೆಯಾ
ನೋಟದಲಿ ತಪನವಿದೆ
ನೋಡೆಯಾ ಬಳಿ ಸಾರೆಯಾ
ಕಂಡ ಕನಸ ರಾತ್ರಿಯಲಿ
ಅರಿವಿರದಾ ಬೆಳಗಿನಲಿ
ಅರಿತೆ ನಾ ತತ್ವದಲಿ
ದೇವನೊಲುಮೆಯ ಪಥದಲಿ
ಬೊಗಸೆಯಂಗಳದಿ ನಿನ್ನ
ಚೆಲುವ ಮೊಗದಲಿ
ಪ್ರೀತಿ ಸೂಸುವ ಕಿರುನಗೆಯಲಿ
ಭಾವತುಂಬಿ ತೇಲುತಿದೆ
ಸುಂದರ ವದನಕೆ
ಮೂಗುತಿಯ ಮುತ್ತಿದೆ
ಮನದಾ ಪದರಕೆ
ಒಲವಿನಾ ಮುದ್ರೆ ಒತ್ತಿದೆ
ಓಡುತಿಹ ಚಂದಿರ
ದೂರವೇತಕೆ ಹೀಗೆ
ನಿನ್ನ ಮೊಗವೇ ಸುಂದರ
ಹತ್ತಿರಕೆ ಬಾ ಹಾಗೇ
ನಿನ್ನಂತರಂಗದ ತಕಧಿಮಿಗೆ
ಕೂಗೇ ಒಮ್ಮೆ ಹಾಗೇ
ರಮ್ಯ ಕದಳಿಯ ವನದಿ ಕುಳಿತೇ
ಕಾಯುತಿಹೆ ನಿನ್ನ ಕಚಗುಳಿಗೆ