ಮಾಜಾನ್ ಮಸ್ಕಿಕವಿತೆ

ಕಾವ್ಯಸಂಗಾತಿ

ಮಾಜಾನ್ ಮಸ್ಕಿಕವಿತೆ

1.
ಬರಿಯ ನೆನಪುಗಳಲ್ಲಿಯೇ ಬದುಕುವುದರಲ್ಲೇನಿದೆ
ಜಾನ್!?
ಎಲ್ಲವನ್ನು ಮರೆತು ಬಾಳುವುದರಲ್ಲಿದೆ ಅರ್ಥ

2.
ಕೊಳ್ಳೆ ಹೊಡೆಯುತ್ತಿದ್ದಾರೆ
ಜಾನ್!!
ಕೋಟ್ಯಾನುಗಟ್ಟಲೆ ಬೆಲೆ ಬಾಳುವ ಮನುಷ್ಯನ ಅಂಗಾಂಗಗಳನ್ನು

3.
ತುಳಿತಕ್ಕೆ ಒಳಗಾದರೂ ಮಿಡಿಯುತ್ತಿದ್ದೇವೆ
ಜಾನ್!!
ಛಿದ್ರ ಛಿದ್ರವಾದ ಹೃದಯ ಹಂದರದಲ್ಲಿ ಆಸೆಗಳು ಬತ್ತಿವೆ

4.

ಅಳುಕುತ್ತ ಅಳುಕುತ್ತ ಹೆಜ್ಜೆಗಳನ್ನು ಇಡಬೇಕು
ಜಾನ್!!??
ಬಿದ್ದರೆ ಕಲ್ಲುಗಳಲ್ಲಿಯೇ ಸಮಾಧಿ ನಿರ್ಮಿಸುವರು


Leave a Reply

Back To Top