ಕಾವ್ಯ ಸಂಗಾತಿ
ಕತ್ತಲ ದೀಪ !!
ಕಾಡಜ್ಜಿ ಮಂಜುನಾಥ ಕವಿತೆ
ಸಕಲರಿಗೆಲ್ಲಾ
ಬೆಳಕು ನೀಡುವ ದೀಪವೇ
ಇಂದು ಕತ್ತಲಲ್ಲಿ ಕುಳಿತಿದೆ;
ತನಗೆ ಆವರಿಸಿದ ತಾಮಸವ
ಓಡಿಸಲು ತಲೆಬಾಗಿ
ಬೇಡುತಿದೆ !
ಬೆಳಕು ಬಯಸಿ ಬಂದ ಜನರ
ಎದೆಗಳು ಕೆಂಡವಾಗಿ ಕುದಿಯುತಿವೆ !
ದೀಪದ ಬೆಳಕಿನ ಶಕ್ತಿಯೇ
ಇಂದು ರಕ್ಷಣೆಯ ಕೋರುತಿದೆ !!
ನಂಬಿಕೆಯ ಎಣ್ಣೆಯು
ದಹನವಾಗಿ; ಅಪನಂಬಿಕೆಯ
ಬತ್ತಿಯು ಮೊಳೆತು ದುರ್ಗಂಧ
ಬೀರುತಿದೆ !
ದೀಪವು ಬುಡದ ಕತ್ತಲು
ಮರೆತು ;ತಾನೇ ಬೆಳಕೆಂದು
ನಯವಂಚಿಸಿ ;ತನ್ನೆದೆಯು
ಕತ್ತಲೆ ಕೋಣೆಯಲ್ಲಿ
ಬೆಳಕಿಗೆ ಮೊರೆಯಿಡುವ
ಕಾಲವ ತಂದುಕೊಂಡಿದೆ !
ಕತ್ತಲಲಿ ಬೆಂದವರ ಎದೆಯ
ಬಿಸಿಯುಸಿರಿನ ಜ್ವಾಲಾಮುಖಿಗೆ
ಬೆಳಕೇ ಇಂದು ಆಸರೆ ಬಯಸಿ
ದೈವವ ಬೇಡುತಿದೆ !!
super ಸೊಗಸಾದ ಕವಿತೆ
ಧನ್ಯವಾದಗಳು
ಸೂಪರ್ ಸಾರ್
ಅದ್ಭುತವಾಗಿದೆ ಸರ್