ಕಾವ್ಯ ಸಂಗಾತಿ
ಗಜ಼ಲ್
ವಾಣಿ ಭಂಡಾರಿ
ನಿನ್ನ ಸ್ಪರ್ಶಕ್ಕಾಗಿ ಕಾದ ಮುಂಗುರುಳಿಗೆ ಏನೆಂದು ಉತ್ತರಿಸಲಿ
ನಿನ್ನ ನಗುವಿಗಾಗಿ ಕಾದ ಕಣ್ಣಾಲಿಗಳಿಗೆ ಏನೆಂದು ಉತ್ತರಿಸಲಿ.
ನಗುವಿನಂಬಾರಿಯಲ್ಲಿ ನಿನ್ನ ಮುಖ ಮಂದಾರ ಹೂವ ಘಮ ಬೀಸಿತ್ತು
ನಿನ್ನ ಆಗಮನಕ್ಕಾಗಿ ಕಾದ ರಾತ್ರಿಗಳಿಗೆ ಏನೆಂದು ಉತ್ತರಿಸಲಿ
ಬಿಸಿಯುಸಿರ ಭಾವಗಳು ತತ್ರಾಣಿಯಲಿ ತಣ್ಣಗೆ ಕಾದು ಕೂತಿವೆ
ನಿನ್ನ ಮಾತುಗಳಿಗಾಗಿ ಕಾದ ಮೌನಗಳಿಗೆ ಏನೆಂದು ಉತ್ತರಿಸಲಿ.
ಕನವರಿಕೆಯ ಇರುಳುಗಳು ಕನಸ ನೆರಳಂತೆ ಮಲಗಿವೆ ದಿಬ್ಬದಲಿ
ನಿನ್ನ ಅಪ್ಪುಗೆಗಾಗಿ ಕಾದ ಬಾಹುಗಳಿಗೆ ಏನೆಂದು ಉತ್ರರಿಸಲಿ.
ನಲ್ಮೆ ಜೀವವಾಣಿ ಕಾಯುತಿದೆ ಹೃದಯ ಬಿಚ್ಚಿ ಏಕಾಂತದಲಿ
ನಿನ್ನ ಒಲುಮೆಗಾಗಿ ಕಾದ ಆತ್ಮಸಖಿಗೆ ಏನೆಂದು ಉತ್ತರಿಸಲಿ.
Wha kya baat hey ji..
ಬಹುಶ .ಒಲವಿನ ಕಾಳಜಿ ಇರಬಹುದು.. ಜಿ