ಕಾವ್ಯಯಾನ
ಬಾಗೇಪಲ್ಲಿ
ಗಜಲ್
ಬಯಸುವೆ ನೆಮ್ಮದಿ ನಿನ್ನೊಡನೆಯೇ ಚಲಿಸಲೆಂದು ನನ್ನೊಲವೆ
ಕೋರುವೆ ಸಕಲ ಕಾಲಕೂ ಸುಖ ನಿನದೇ ಆಗಿರಲೆಂದು ನನ್ನೊಲವೆ
ಬೇಡುವೆ ಕಷ್ಟ ಕಾರ್ಪಣ್ಯದ ಮೋಡಗಳು ನಿನ್ನೆಡೆಗೆ ಸುಳಿಯದಿರಲು
ಪ್ರಜ್ವಲ ಇಂದ್ರಧನಸ್ಸಿನ ಬಣ್ಣದ ಮೋಡಿ ಕಾಣುತಿರಲೆಂದು ನನ್ನೊಲವೆ
ದುಗುಡ ದುಮ್ಮಾನಗಳನು ಬೇಡುವೆ ನಿನ್ನ ಸುಂದರ ಮುಖವ ಸೋಂಕದಿರಲು
ಮುತ್ತನಿಕ್ಕೆ ಸಿದ್ಧವಿರುವ ತುಟಿಗಳ ತಾ ಹೊಂದಿರಲೆಂದು ನನ್ನೂಲವೆ
ನಿನ್ನ ಬಾಳುವೆಯ ಪ್ರತಿ ಸೂರ್ಯಾಸ್ತ ಅರುಣೋದಯಗಳೆಲ್ಲಾ
ನಿನ್ನೆದೆಯ ನಿರಾಳಗೊಳಿಪ ಕಿರಣಗಳಾಗಿ ಮಾರ್ಪಡಲೆಂದು ನನ್ನೊಲವೆ
ಕೃಷ್ಣಾ! ನಿನ್ನರಿವಿಗೆ ಬಾರದೆ ನಿನ್ನಂದವ ಕಣ್ಣಲಿ ಸವಿದು ಸುಖಿಸಿರುವೆ.
ತುಸುಪಾಪಪ್ರಜ್ಞೆ ಇಲ್ಲದೆ ಆಶಿಸುತಿರುವೆ ಶುಭವಾಗಲೆಂದು ನನ್ನೊಲವೆ