ಗಜಲ್

ಕಾವ್ಯಸಂಗಾತಿ

ಗಜಲ್

ರೋಹಿಣಿ ಯಾದವಾಡ

ನಲುಗಿಸುವವರ ನಡುವೆ ನಗುತ ನಿಂತು ನಲಿಯಬೇಕಿದೆ
ಅಳಿಸುವವರ ನಡುವೆ ಅಳದೆ ನಿಂತು ಅರಳಬೇಕಿದೆ

ಮುಖವಾಡಿಗರ ನಡುವೆ ಬಾಗದೆ ನಿಂತು ಕಳಚಬೇಕಿದೆ
ಸೊಗಲಾಡಿಗರ ನಡುವೆ ಸೋಲದೆ ನಿಂತು ಬೆಳೆಯಬೇಕಿದೆ

ಕಟುಕರ ನಡುವೆ ದಯೆಯಿಂದ ನಿಂತು ತೋರಬೇಕಿದೆ
ತುಳಿಯುವವರ ನಡುವೆ ಮೆಟ್ಟಿ ನಿಂತು ಏಳಬೇಕಿದೆ

ಕುತಂತ್ರಿಗರ ನಡುವೆ ಬೇರೂರಿ ನಿಂತು ಹೆಣೆಯಬೇಕಿದೆ
ತಂತ್ರಗಾರರ ನಡುವೆ ದಿಟದಿ ನಿಂತು ಭೇದಿಸಬೇಕಿದೆ

ವಂಚಕರ ನಡುವೆ ಮಿಂಚಿ ನಿಂತು ಬಾಳಬೇಕಿದೆ
ರೋಹಿಣಿಯ ಅರಿತವರ ಸ್ನೇಹದಲಿ ಬದುಕು ಸಾಗಬೇಕಿದೆ


Leave a Reply

Back To Top