ಗಜಲ್- ಸುಕನಸು

ಕಾವ್ಯ ಸಂಗಾತಿ

ಗಜಲ್

ಸುಕನಸು

ಒಂಟಿಯಾಗಿ ಅಳುವುದು ನನ್ನಪಾಲಿಗಿರಲಿ ಗೆಳೆಯ
ನಗುವೆಂಬುದು ಮರೆಯದೆ ನಿನ್ನ ಜೊತೆಗಿರಲಿ ಗೆಳೆಯ

ಸುಖಬೇಕಿಲ್ಲ ಅಷ್ಟು ಪುಣ್ಯವಂತೆ ನಾನಲ್ಲದಿರಬಹುದು
ನೆಮ್ಮದಿಯ ಹೊನಲು ಸದಾ ನಿನ್ನೊಂದಿಗಿರಲಿ ಗೆಳೆಯ

ಒಲವಿಲ್ಲದ ಬದುಕು ರೂಢಿಯಾಗಿದೆ ನಾ ಜೀವಿಸಬಲ್ಲೆ
ಪ್ರೀತಿ ಪ್ರೇಮದ ಸ್ವಾದ ನಿನಗೆ ಮುಡಿಪಾಗಿರಲಿ ಗೆಳೆಯ

ಮಧುರ ಭಾವದ ನೆನಪುಗಳು ಬೆಂಬಿಡದೆ ಕಾಡುತಲಿವೆ
ನಿನ್ನಯ ಜೀವನ ಅನುಕ್ಷಣವೂ ಅಮೃತವಾಗಿರಲಿ ಗೆಳೆಯ

ನಿನ್ನ ಹರುಷವನು ಎಂದಿಗೂ ನಾ ಕಸಿದುಕೊಳ್ಳಲಾರೆನು
ಸುಮಾ ಹರಸುವಳು ಸಂತಸವು ನಿನ್ನದಾಗಿರಲಿ ಗೆಳೆಯ


ಸುಕನಸು

Leave a Reply