ಕಾವ್ಯ ಸಂಗಾತಿ
ಗಜಲ್
ಹರಿನರಸಿಂಹ ಉಪಾಧ್ಯಾಯ
ಹುಣ್ಣಿಮೆಯ ರಾತ್ರಿಯಲಿ ನಾ ಕಂಡ ಸುಂದರಿಯು ನೀನು
ತಣ್ಣನೆಯ ತಂಗಾಳಿಯಲಿ ತೇಲಿ ಬಂದ ಕಿನ್ನರಿಯು ನೀನು
ಬೆಳದಿಂಗಳ ಬೆಳಕಿನಲಿ ಹೊಳೆವ ವಯ್ಯಾರಿ ಯಾರಿವಳು
ಇಳೆ ಬಾನು ಹುಡುಕಿದರೂ ಕಾಣದ ಸಿಂಗಾರಿಯು ನೀನು
ಆಗಸದ ತುಂಬೆಲ್ಲ ಚುಕ್ಕಿ ತಾರೆಗಳ ಸಂಭ್ರಮವು ಇಂದು
ವೇಗದಲಿ ಬಿಳಿಮೋಡವೇರಿ ನಡೆದ ಬಂಗಾರಿಯು ನೀನು
ಇರುಳ ಒಂಟಿತನವನು ಕಳೆಯಲು ಓಡೋಡಿ ಬಾ ಬೇಗ
ಮರುಳಾಗಿಸುವ ಅಪ್ಸರೆಯಂತಹ ಕೌಮಾರಿಯು ನೀನು
ಹರಿಯಿಲ್ಲಿ ಕುಳಿತಿರುವ ಕಾರಣವನು ಕೇಳುವವರೇ ಇಲ್ಲ
ಮರೆಯದೇ ಆಗಮಿಸಿ ತಂಪೆರೆವ ಮದನಾರಿಯು ನೀನು
ಸಂಗಾತಿ ಬ್ಲಾಗ್ ನಲ್ಲಿ ನನ್ನ ಗಝಲ್ ಪ್ರಕಟಿಸಿದ ಸಂಪಾದಕರಿಗೆ ತುಂಬು ಮನದ ಧನ್ಯವಾದಗಳು