ಊರಿನ ಘನತೆ ನಿನ್ನಿಂದಲೇ

ಕಾವ್ಯ ಸಂಗಾತಿ

ಊರಿನ ಘನತೆ ನಿನ್ನಿಂದಲೇ

ಟಿ.ದಾದಾಪೀರ್

ನಾನು ಆಗಾಗ ನಿಮ್ಮ ಊರಿಗೆ
ಬರುತ್ತಿದ್ದೆ
ಅದೇ ಮಾಮೂಲಿ ತಂಡಿ ಹವಾ
ಬಿಸಿ ಬಿಸಿ ಕಾಫಿಯ ಘಮ
ಕಾರಿನಲ್ಲಿ ಬಂದಿಳಿಯುವ
ಜೀನ್ಸ್ ಪ್ಯಾಂಟ್ ಹುಡ್ಗೀರು
ಅಷ್ಟೇ ಅನ್ನಿಸ್ತಿತ್ತು

ಆದರೆ ಮೊನ್ನೆ ನಾನು ನಿನ್ನಊರಿಗೆ ಬಂದಾಗ
ನಿನ್ನೂರಲಿ ಮಳೆಯ ಸೀಜನ್
ಬಹಳ ಸ್ಪೇಷಲ್ ಅನ್ನಿಸಿತು
“ಗೆಳತಿ ನೀನು ಡೈಲಿ ಕೂದಲು ಹರಡಿಕೊಂಡು ನಾಮ೯ಲ್ ಆಗಿ ಇರುವಂತೆ” ದಟ್ಟ ಕಪ್ಪು ಮಳೆ ಮೋಡಗಳು
“ಆಕಾಶದಲ್ಲಿಯು ನೀನೆ ರೂಪ ತಳೆದಂತೆ”

ಶಾಪಿಂಗ್ ಗೆ ಅಂತ ಬಂದು ಸ್ಕೂಟಿ ಬಿಟ್ಟು
ರಸ್ತೆಗಿಳಿವ ಕೂಲಿಂಗ್ ಗ್ಲಾಸ್ ಲಲನೆಯರು ಈಗ
ಮೊದಲಿನಂತಿಲ್ಲ
ಒಬ್ಬಳದು ಸುರುಳಿ ಮುಂಗುರುಳು
ಇನ್ನೊಬ್ಬಳದು ಆಗಾಗ
ಜಾರುವ ದುಪಟ್ಟಾ
ನಡೆದರೆ ತೇಟ್ ನಿಮ್ಮಂತೆಯೇ
ಮುತ್ತುಗಳು ನೆಲದ ಮೇಲೆ ಚಲಿಸಿದಂತೆ
“ಗೆಳತಿ ನೀನೆ ಬೇರೆ ನಿನ್ನ ಸ್ಟೈಲೆ ಬೇರೆ
ಆದರೂ ಎಲ್ಲೆಲ್ಲೂ ನೀನೆ”

ಮಳೆ ಬಂದು ನಿಂತರೂ
ನೀನು ನಡೆದಾಡಿರಬಹುದಾದ
ನಿನ್ನ ಊರಿನ ರಸ್ತೆ ಮೇಲೆಲ್ಲ ನಿನ್ನ
ಕಾಲಿನ ಹೆಜ್ಜೆ ಗಳ ಗುತು೯ಗಳು
ಅಳಿಸದಂತಿವೆ
‘ಆಕಾಶದ ನಕ್ಷತ್ರಗಳಿರಬಹುದೇ?
ನಿನ್ನ ಪಾದದ ಗುರುತು ಗಳು ಅಳಿಸದಂತೆ ಹುಷಾರಾಗಿ
ನಾನು ಹೆಜ್ಜೆ ಇಟ್ಟು ಬಂದಿದ್ದೆನೆ

ಹವಾ ತೀಡಿದಾಗ
ಕಾಫಿ ಹೀರಿದಾಗ
ಮಳೆಗೆ ಮೈ ನೆನೆದಾಗ
ನಿಮ್ಮ ಊರಲ್ಲಿ ಹೇಳಿಕೊಳ್ಳದ
ಹೊಸ ಅನುಭವ
ಗೆಳತಿ ನೀನಿಲ್ಲದೆ ನಿನ್ನ ಊರಿಗೆ ಏನು ಮಹತ್ವ ಇಲ್ಲ….


ಟಿ.ದಾದಾಪೀರ್

Leave a Reply

Back To Top