ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಬಾಗೇಪಲ್ಲಿ

ಗಜಲ್
(ಚೋಟಿ ಬೆಹರ್, ಪುಟ್ಟ ಗಜಲ್)

ಈಗ ಅವನ ಭೇಟಿಮಾಡ ಬಯಸುವೆ
ಕ್ಷಣ ಎದುರು ನಿಂತು ಮಾತಾಡಿಸುವೆ

ಕದ್ದಿದ್ದೆ ಕಾಲೇಜಿನಲಿ ಆತನ ಪುಸ್ತಕವ
ಈ ಮುದಿತನದಿ ಕ್ಷಮೆ ಯಾಚಿಸುವೆ .

ಕೀಳಾಗಿ ನೋಡಿದ್ದನೊಮ್ಮ ಆತ ನನ್ನ
ಸಹೃದಯ ಹೊತ್ತ ನಾ ಮನ್ನಿಸುವೆ .

ಬಾಳು ಬದುಕೆಲ್ಲಾ ನಶ್ವರವೆಂದು ಅರಿತೆ
ಶುಭ ಮಾತಾಡಿ ಜೀವನ ಮುಗಿಸುವೆ

ಆ ಮಾಳ್ಪುದ ಈಗ ಮಾಡಿದರೇನು ಕೃಷ್ಣ
ಬಿತ್ತಿದ್ದು ಬೆಳೆ ಎನುವುದ ಖರೆ ಆಗಿಸುವೆ


ಬಾಗೇಪಲ್ಲಿ

About The Author

Leave a Reply

You cannot copy content of this page

Scroll to Top