ಕಾವ್ಯ ಸಂಗಾತಿ
ಮನೆ ಬಾಡಿಗೆಗೆ ಇದೆ
ರಾಹುಲ್ ಸುಭಾಷ್ ಸರೋದೆ
ಯಾರು ಇಲ್ಲದ ಗುಡ್ಡದ ಮೇಲಿರುವ
ದೊಡ್ಡ ಅರಮನೆಯೊಂದು ಬಾಡಿಗೆಗೆ ಇದೆ
ವಾಸ್ತು ಸರಿ ಇಲ್ಲದಿದ್ದರೂ ಶಾಂತಿ ಮಾಡಿಸಿಯಾಗಿದೆ
ಮನೆಯೊರಗಿನ ದೊಡ್ಡ ಬಾಗಿಲಿಗೆ
ಲಿಂಬೆಹಣ್ಣು ಮಂತ್ರಿಸಿ ಕಟ್ಟಿದ್ದು ಹಾಗೇ ಇದೆ
ಹಾವು ಚೇಳುಗಳ ಹರಿದಾಟ ಭೂತಚೇಷ್ಟೆಗಳ ಕಿತ್ತಾಟ
ಮನೆ ಬಾಡಿಗೆಗೆ ಇದೆ 20-30 ರ ಸೈಜಿನ
ನೋಡುಗರ ಕಣ್ಮನ ಸೆಳೆಯುವ ಮನೆ ಬಾಡಿಗೆಗೆ ಇದೆ
ಪ್ರೇಮಿಗಳ ಕಿತ್ತಾಟಕ್ಕೆ ಕುಡು ಕುಟುಂಬದ ಜನ ಜಂಗುಳಿಗೆ
ನನ್ನದೊಂದು ಮನೆ ಬಾಡಿಗೆಗೆ ಇದೆ
ಬಾಡಿಗೆಗೆ ಮನೆ ಬೆಕೆಂದವರು ಬಾರಲೋಲ್ಲರು
ದ್ಯಾಮವ್ವ ದೇವಿ ನೇಲಸಿರುವ ಆ ಗುಡ್ಡದ ಗವಿಯ
ಬಲಭಾಗದಿ ಪೂರ್ವ ಭಾಗದ ಈಶಾನ್ಯ ಮೂಲೆಯಲ್ಲಿ
ನನ್ನ ಮನೆ ಬಾಡಿಗೆಗೆ ಇದೆ ಯಾರಿಗಾದರೂ ಬೇಕಾಗಿದ್ದಲ್ಲಿ
ದೇವಲೋಕದ 2ನೇ ಬಾಗಿಲಿಗೆ ಬಂದು ಸಂಪರ್ಕಿಸಿ
ಮನೆ ಬಾಡಿಗೆಗೆ ಇದೆ ನನ್ನದೊಂದು
ಮನೆ ಬಾಡಿಗೆಗೆ ಇದೆ
Super sir