ಪ್ರೇಮದ ಪರಿ

ಕಾವ್ಯ ಸಂಗಾತಿ

ಪ್ರೇಮದ ಪರಿ

ಜಯಲಕ್ಷ್ಮಿ ಎಂ ಬಿ

ಕಳೆದು ಹೋಗಿಹೆನು ನಿನ್ನ ಪ್ರೇಮದ ಪರಿಯಲಿ
ತೇಲುತಿಹೆ ನಾ ಪ್ರೀತಿ ಸಾಗರದ ಅಲೆಗಳಲಿ

ಆಲಿಸುವೆಯಾ ಗೆಳೆಯಾ ನನ್ನೊಲವಿನ ನುಡಿಗಳನು
ಬರುವೆಯಾ ನೀ ಬೆಳದಿಂಗಳಾಗಿ ನನ್ನ ಬಾಳ ನೌಕೆಗಿಂದು

ನಿನ್ನೊಡನೆ ಗಿರಿಕಂದರಗಳನು ಸುತ್ತಿ ನೋಡುವಾಸೆ
ಸಾಗರದ ರವಿಯೋಕುಳಿಯಲಿ ಮಿಂದು ಸೇರುವಾಸೆ

ತಾರೆಗಳ ಲೋಕದಲಿ ವಿಹರಿಸಿ ಚಂದಿರನ ಮುಟ್ಟುವಾಸೆ
ನಿನ್ನ ಎದೆಗೊರಗಿ ಹೃದಯ ಬಡಿತವನು ಆಲಿಸುವಾಸೆ

ನಿನ್ನ ನೆನಪಿನಲಿ ಸಾಗರ ಸೇರಿ ಮುತ್ತಾಗಿ ಹೋಗುತಿಹ
ಕಣ್ಣ ಹನಿಯನು ಹಿಡಿದು ನಿನಗೆ ತೊಡಿಸುವಾಸೆ

ನಿನ್ನ ಆಲಿಂಗನ ನನಗೆ ಮಿಂಚಿನ ಸಂಚಾರ
ಎಂದು ಬರುವೆಯಾ ಗೆಳೆಯಾ ನನ್ನ ಬಳಿಗೆ
ಕಾಯುತಿಹೆನು ನಿನ್ನೊಲವಿನಲಿ ಮುಳುಗಿ ಸುಖಿಸಲು


Leave a Reply

Back To Top