ಗಝಲ್

ಕಾವ್ಯ ಸಂಗಾತಿ

ಗಝಲ್

ಆಸೀಫಾ

ಆಗಸದ ಚುಕ್ಕಿ ಕಿತ್ತು ತಂದ ಮುಡಿಗೇರಿಸಿ ಮಿನುಗು ಎಂದ
ಧರೆಗಿಳಿದ ರಂಭೆ ನೀನು ದರ್ಪಣಕೆ ನೀನೇ ಮೆರುಗು ಎಂದ

ನಿಂತಲ್ಲೇ ನಗಿಸಿ ಮಾತಲ್ಲೆ ಮಣಿಸಿ ಮುದ್ದು ಮಾತಾಡಿದ
ತಂಗಾಳಿ ತಂಪಲ್ಲಿ ಒಲವ ಕಂಪು ಕಳಿಸಿ ತಂಪಾಗು ಎಂದ

ತುಟಿ ಕಚ್ಚಿ ತಡೆದ ಮಾತುಗಳಿನ್ನು ಎಲ್ಲೆಮೀರಿ ಹರಿದಿವೆ
ಕಣ್ಣಲ್ಲಿ ಕಣ್ಣಿಟ್ಟು ಸುಂದರೀ ಪ್ರೇಯಸಿಯಾಗು ಎಂದ

ಪುಳಕಿತವು ಮನ ತನುವು ರೋಮಾಂಚನ ಸಿಂಚನ
ಹೂಹಾಸಿ ಹಾದಿಗೆ ಹೆಜ್ಜೆ ಇಟ್ಟು ಜೊತೆಯಾಗು ಎಂದ

ಪ್ರೇಮದ ಪರಿಮಳ ಪರಿಸರವೆಲ್ಲ ಪಸರಿಸಿ ಘಮ ಘಮ
ಇತಿಹಾಸ ಬರೆಯಬೇಕಿದೆ ಆಸೀ ಲೇಖನಿಯಾಗು ಎಂದ-


8 thoughts on “ಗಝಲ್

    1. ಚಂದದ ಗಜಲ್ ಮೇಡಂ
      ಓದಿ ಮನ ಅರಳಿತು

Leave a Reply

Back To Top