ಗಜ಼ಲ್

ಕಾವ್ಯ ಸಂಗಾತಿ

.ಗಜ಼ಲ್

ಎ. ಹೇಮಗಂಗಾ

ನಿನಗೆ ಅಂದು ಕೊಟ್ಟ ವಚನವ ಉಳಿಸಲಾಗಲಿಲ್ಲ ಕ್ಷಮಿಸು
ನಾನು ಇಂದು ತೊಟ್ಟ ನಿಲುವ ಬದಲಿಸಲಾಗಲಿಲ್ಲ ಕ್ಷಮಿಸು

ಕೊನೆತನಕ ನಿನಗೆ ಆಸರೆಯಾಗಿಯೇ ಇರುವೆನೆಂದೆಣಿಸಿದ್ದೆ
ಅಸಹಾಯಕತೆಯ ಸೆರೆಯಿಂದ ಹೊರಬರಲಾಗಲಿಲ್ಲ ಕ್ಷಮಿಸು

ಋತುಗಳು ಬದಲಾದರೂ ಯಾವುದೂ ಹೊಸತೆನಿಸಲಿಲ್ಲ
ಹೆಚ್ಚಾದ ಮನದ ಒಳಗುದಿಯ ತಣಿಸಲಾಗಲಿಲ್ಲ ಕ್ಷಮಿಸು

ಹುಸಿನಗೆಯಲಿ ತಲ್ಲಣಗಳ ಮುಚ್ಚಿಡಲು ಸಾಧ್ಯವಿಹುದೇ ?
ಕಾಡಿದ ನೋವುಗಳ ಮರೆಸಿ ನಲಿವು ನೀಡಲಾಗಲಿಲ್ಲ ಕ್ಷಮಿಸು

ನಿರೀಕ್ಷೆಗಳೇ ಇಲ್ಲದ ಬದುಕಲಿ ಬಯಕೆಗಳೂ ಕಾಡಿಸಲಾರವು
ಸಮಾನಾಂತರ ರೇಖೆಯಾಗಿ ಸಾಗುವುದ ತಪ್ಪಿಸಲಾಗಲಿಲ್ಲ ಕ್ಷಮಿಸು


2 thoughts on “ಗಜ಼ಲ್

Leave a Reply

Back To Top