ಕಾವ್ಯ ಸಂಗಾತಿ
ಹೃದಯ ಕಂಪಿಸಿದೆ
ಮರುಳಸಿದ್ದಪ್ಪ ದೊಡ್ಡಮನಿ
ನಿನ್ನದೆ ನೆನಪೊಂದು ಕಾಡುತಿದೆ ನೋಡು
ಹೃದಯ ಕಾಯುತ ಕಂಪಿಸಿದೆ ಬಂದು ಬಿಡು
ಒಳಗಿನ ನೋವು ಜೀವ ತಿನ್ನುತಿದೆ ಸಾಕು ಮಾಡು
ಒಲವಿನಲಿ ಹಾಡಿ ಚಿಂತೆಗಳ ದೂರ ಸರಿಸಿಬಿಡು
ಮತ್ತೆ ಮತ್ತೆ ಒತ್ತರಿಸಿ ಬರುವ ಕಣ್ಣಿರ ಒರೆಸಿಬಿಡು
ಲೋಕ ನಿಂದೆಯ ಕೇಳದೆ ಮುಂದಡಿ ಇಡು
ಹೊಸಹಾಡಿಗೆ ಹೊಸ ಪಲ್ಲವಿಯ ಬರೆದು ಬಿಡು
ಅರಳುವ ಭಾವ ಬಂಧದ ಹೂವ ಮುಡಿದು ಬಿಡು
ಕಲುಕಿದ ನೋವಿಗೆ ಹೊಸ ಹಾದಿ
ತೋರಿಬಿಡು
ಮತ್ತೆ ಹಬ್ಬಿ ಅರಳಲಿ ಪ್ರೀತಿಯ ಕಂಪು ನೋಡು
ಸುವಾಸೆನೆ ಜಗಕೆ ಪಸರಿಸಲಿ ನಿನ್ನ ನೀ ಮರೆತುಬಿಡು
ಬಿದ್ದ ಕರಿ ನೆರಳ ಪರದೆ ಸರಿಸಿ ನಡೆದು ಬಿಡು