ಬುಗುರಿ

ಮಕ್ಕಳ ಕವಿತೆ

ಬುಗುರಿ

ಲೀಲಾ ಕಲಕೋಟಿ

ನನ್ನಯ ಬುಗುರಿ
ಬಣ್ಣದ ಬುಗುರಿ

ಅಪ್ಪನು ಕೊಡಿಸಿಹ
ಚೆಂದದ ಬುಗುರಿ

ಹಸಿರು ಕೆಂಪು ಬಣ್ಣದ
ಗೆರೆಗಳ ಬುಗುರಿ

ಗರ ಗರ ತಿರುಗುತ
ಗುಡು ಗುಡು ಉರುಳುವ

ದುಂಡನ ಬುಗುರಿ
ಸುರು ಸುರು ಸಪ್ಪಳ

ಮಾಡುತ ಸರ ಸರ
ನೆಲ ಕೊರೆವ ಬುಗುರಿ

ನಲಿ ನಲಿದಾಡುತ
ಆಡುವ ಬುಗುರಿ

ನನ್ನಯ ಬುಗುರಿ
ಬಣ್ಣದ ಬುಗುರಿ


Leave a Reply

Back To Top