ಕಾವ್ಯ ಸಂಗಾತಿ
ಬುದ್ಧನ ಮುಗುಳುನಗೆ
ಪ್ರೊ ರಾಜನಂದಾ ಘಾರ್ಗಿ
ಬಯಕೆಗಳ ಪ್ರವಾಹದಿ
ದಡ ಕಾಣಲಾರದೇ
ತೇಲಿಹೋದ ಮನ
ಅಲೆಗಳ ರಭಸಕ್ಕೆ ತತ್ತರಿಸಿದೆ
ಕೈಕಾಲುಗಳ ಬಿಚ್ಚುತ್ತ
ಪ್ರವಾಹದ ವಿರುದ್ಧ
ಸೆಣಸಾಟದಲ್ಲಿ ಬಳಲಿ
ಸೋತು ತತ್ತರಿಸಿದೆ
ಕಾಣದೇ ಪ್ರಪಾತವ
ಸಾಗರವ ನೆನೆಯುತ್ತ
ಸಂತಸದಿ ಚಲಿಸಿದ ಮನ
ಪ್ರಪಾತಕ್ಕೆ ಧುಮುಕಿದೆ
ಸೆಣಸ ಬಯಸುತ್ತಿದ್ದ
ಕೈಕಾಲುಗಳ ಬಿಚ್ಚಿ ಎಸೆದು
ನಿಶ್ಚಲವಾದ ಮನಸ್ಸು
ಬುದ್ಧನಂತೆ ಮುಗುಳು ನಗುತ್ತಿದೆ
ಪ್ರೊ ರಾಜನಂದಾ ಘಾರ್ಗಿ