ಕಾವ್ಯ ಸಂಗಾತಿ
ನೋಟ
ಮಾಜಾನ್ ಮಸ್ಕಿ
ನಿನ್ನ ನೋಟ ಒಂದೇ ಸಾಕಾಗಿದೆ
ಈ ಕಂಗಳ ಮಾಧಕತೆ ಮತ್ತೇರಿಸಲು
ಪರದೆ ಸರಿಸುವುದೇ ಬೇಡ
ಸದಾ ಕಣ್ಣೆದುರಲ್ಲೇ ಮೌನ ಹಿತವಾಗಿದೆ
ಕಂಗಳು ಬೆರೆತಾಗ ನಲಿವಿನಲಿ
ಅನುರಾಗದ ಕುಸುಮವೊಂದು
ಅರಳಿತು ಸುಂದರ ಸೊಬಗಿನಲಿ
ಮೌನ ಮಾತಾಗಿ ಕವಿತೆವೊಂದು
ಹೃದಯ ವೀಣೆ ಮೀಟಿ
ಕವಿತೆಯ ಭಾವ ರಾಗವಾಗಿ
ಸುಮಧುರ ತರಂಗವು ತೇಲಿ
ಮನ ಸೂರೆಗೊಂಡಿತು ಹರುಷದಲಿ
ಎಲ್ಲೋ ಅರಳಿದ ಪ್ರೇಮ ಇನ್ನೆಲ್ಲೋ ಪರಿಮಳದ ಸಂಕೇತ
ಬಲ್ಲವರ್ಯಾರು ಪ್ರೇಮದ ಪರಿಯ
ಆಸೆಯ ತೋರುತ ನಿರೀಕ್ಷೆಯ ಬೆನ್ನಟ್ಟಿ