ಕಾವ್ಯ ಸಂಗಾತಿ
ಗಜಲ್
ಮಾಜಾನ್ ಮಸ್ಕಿ
ಋಣಾತ್ಮಕ ಪ್ರೀತಿಗೆ ಉತ್ತರ ಕೊಟ್ಟು ಕೊಟ್ಟು ಸೋಲುತ್ತಿದೆ ಕಣ್ಣೀರು
ನಂಬಿದವರೇ ಚೂರಿ ತಿವಿಯುತ್ತಿರಲು ಸಾಯುತ್ತಿದೆ ಕಣ್ಣೀರು
ಹರಿಯುವ ನೀರಿಗೆ ಎದುರಾಗಿ ಈಜುತ್ತಿರುವುದು ಮೊಂಡು ಧೈರ್ಯವೆ
ಕಲ್ಲು ಮುಳ್ಳು ಪರಚಿ ಗಾಯದ ಮೇಲಿನ ಗಾಯಕ್ಕೆ ರಕ್ತ ಬಸಿಯುತ್ತಿದೆ ಕಣ್ಣೀರು
ನಿಷ್ಠೆ ಪ್ರಪಂಚದ ದೃಷ್ಟಿಯಲ್ಲಿ ಮತಿ ಭ್ರಮಣಯಂತೆ ಕಾಣುತ್ತಿದೆ
ಕುಹಕ ನಗೆ, ಮಾತಿನಲ್ಲಿ ಕಲ್ಲುಗಳನ್ನು ಎಸೆದು ಹಿಂಸಿಸುತ್ತಿದೆ ಕಣ್ಣೀರು
ಉಸಿರು ನಿಂತ ಗೋರಿಯು ಉಸಿರಾಡುತ್ತಿದೆ ನಿತ್ಯದ ನೋವು ಕಂಡು
ಜೀವಂತ ಎದ್ದು ಬಂದು ಸಂತೈಸಲು ಬಯಸುತ್ತಿದೆ ಕಣ್ಣೀರು
ಕರುಣೆಯೇ ಇಲ್ಲದ ಜನರಲ್ಲಿ ಒಡನಾಟ ಏತಕ್ಕಾಗಿ “ಮಾಜಾ”
ಸ್ವಾರ್ಥಿಗಳ ಮಧ್ಯೆ ನಿರಾಳವಾಗಿ ಬದುಕು ಸಾಗಿಸುತ್ತಿದೆ ಕಣ್ಣೀರು