ಕಾವ್ಯ ಸಂಗಾತಿ
ತೀರವಿರದ ಕಡಲು
ಅರುಣ ನರೇಂದ್ರ
ಸಾವೆಂದರೆ ಸಂಭ್ರಮ
ಅರುಣಾಗೆ
ಸೋಲಾಯಿತೆಂದು
ಖುಷಿ ಪಡಬೇಡ
ಅವಳು ಸೋಲನ್ನೂ
ಸಂಭ್ರಮಿಸುತ್ತಾಳೆ !
***
ಅರುಣಾ ಗೆ
ಸಾವಾಯಿತೆಂದು
ಸಂಭ್ರಮಿಸಬೇಡ
ಅವಳು ಸಾವಿನಲ್ಲೂ
ಸುಖಿಸುತ್ತಾಳೆ !
***
ಸಾವಿಗಂಜುವಳಲ್ಲ
ಅರುಣಾ….
ಬದುಕಿರುವಾಗಲೇ
ಅದೆಷ್ಟೋ ಬಾರಿ ಸತ್ತಿದ್ದಾಳೆ
ಅವಳ ದಫನ್ ಮಾಡಿದ
ನೆಲದ ತುಂಬಾ
ಬರಿ ಗಜಲ್ ಗಳದೇ
ಘಮಲು…!
****