ಗಜಲ್

ಕಾವ್ಯ ಸಂಗಾತಿ

ಗಜಲ್‍

ಮಾಜಾನ್ ಮಸ್ಕಿ

ನಿನ್ನ ಪ್ರೀತಿಯು ಕಳೆ ಮೂಡಲು ಬಿಡುತ್ತಿಲ್ಲ ಸಖ
ಆಣೆ ಇಟ್ಟ ಮಾತು ಸಾಯಲು ಬಿಡುತ್ತಿಲ್ಲ ಸಖ

ಮೋಸ ಇರದ ಪ್ರೇಮ ಉಸಿರು ಇರುವವರೆಗೂ
ನೆನಪುಗಳು ನಿನ್ನಿಂದ ದೂರಾಗಲು ಬಿಡುತ್ತಿಲ್ಲ ಸಖ

ಪ್ರೀತಿಯಲ್ಲಿ ಅಂತರ ಇರಬೇಕು ಎನ್ನುವರು ನಿಜವೇ
ನಿರೀಕ್ಷೆ ಮೀರಿದರೂ ಬೆಸರಿಸಲು ಬಿಡುತ್ತಿಲ್ಲ ಸಖ

ಕರಗಳನ್ನು ಹಿಡಿದು ಹೃದಯದ ಬಡಿತ ಕೇಳುವ ಆಸೆ
ಕನಸಿನ ಹೊಂಬಿಸಿಲು ಮರೆಯಲು ಬಿಡುತ್ತಿಲ್ಲ ಸಖ

ನನ್ನ ಒಡನಾಡಿ ಆಗಿರುವೆ ಆರಾಧನೆಯಲ್ಲಿ “ಮಾಜಾ”
ಪ್ರಪಂಚದ ರೂಢಿಯಂತೆ ಬದುಕಲು ಬಿಡುತ್ತಿಲ್ಲ ಸಖ


Leave a Reply

Back To Top