ಪಠ್ಯ ಪುಸ್ತಕ ಪರಿಷ್ಕರಣೆ

ಲೇಖನ

ಪಠ್ಯಪರಿಷ್ಕರಣೆಯ ಬಗ್ಗೆ

ಒಬ್ಬ ಪೋಷಕಿಯ ಟಿಪ್ಪಣಿ

ಬದಲಾವಣೆ ಜಗದ ನಿಯಮ.ಪರಿಸ್ಥಿತಿಗೆ ಅನುಗುಣವಾಗಿ ಬದಲಾಗದ ಯಾವುದೇ ಜೀವಿಯು ಭೂಮಿಯ ಮೇಲೆ ಬದುಕುಳಿಯಲು ಸಾಧ್ಯವಿಲ್ಲ. ಹೀಗಿರುವಾಗ ಕಾಲಕ್ಕೆ ತಕ್ಕಂತೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದೇವೆ ಎಂಬುದು ಹೊಸ ಪಠ್ಯಪುಸ್ತಕ ಸಮಿತಿಯವರ ವಾದ. ಬದಲಾವಣೆಯಿಂದ ತಪ್ಪೇನು?ಎಂಬ ಹೆಮ್ಮೆ ಮತ್ತು ಸಮಾಧಾನ ಬೇರೆ.ಮಾಡಿ ಸ್ವಾಮಿ,ಬದಲಾವಣೆ ಬೇಡವೆಂದವರು ಸುಮ್ಮನೆ ಬಾಯಿಕಟ್ಟಿ ಕುಳಿತು ಓದಬೇಕು ರೀತಿಯಲ್ಲಿ ಬದಲಾವಣೆ ತನ್ನಿ. ಅದನ್ನು ಬಿಟ್ಟು ಅಧಿಕಾರದ ಅಮಲಿನಲ್ಲಿ ಸತ್ಯವನ್ನು ತಿರುಚಿ ಮಕ್ಕಳಿಗೆ ಸುಳ್ಳನ್ನು ಭೋದಿಸಬೇಡಿ.

ನಮ್ಮ ಹಿಂದಿನ ಸಮಿತಿ ಮತ್ತು ಸರ್ಕಾರ ಮಾಡಿರುವ ತಪ್ಪುಗಳನ್ನು ಗುರುತಿಸಿ ಸರಿ ಮಾಡುವ ಕಡೆ ಗಮನಹರಿಸಬೇಕೇ ಹೊರತು ನೀವೂ ತಪ್ಪು ಮಾಡುತ್ತಾ ನಿಮ್ಮ ಬೇಳೆ ಬೇಯಿಸಿಕೊಳ್ಳಬೇಡಿ.

ಕನ್ನಡ ಪಠ್ಯದಲ್ಲಿ ಸಂಸ್ಕೃತವನ್ನು ಹೇರಿಕೆ ಮಾಡುವುದು,ಗಾಂಧಿ, ಬುದ್ಧ,ಬಸವಣ್ಣ, ಅಂಬೇಡ್ಕರ್ ಮೊದಲಾದವರ ಬಗೆಗಿನ ಪ್ರಮುಖ ಅಂಶಗಳನ್ನು ತಿರುಚುವುದು ಅಥವಾ ಕೈಬಿಡುವುದು, ರಾಜಕೀಯ ಪ್ರೇರಿತ ದ್ವೇಷಗಳನ್ನು ಸಾಧಿಸುವುದು ಇವೇ ನಿಮ್ಮ ಮುಖ್ಯ ಪರಿಷ್ಕರಣೆಯ ಉದ್ದೇಶವಾಗಿದ್ದರೆ, ಅದನ್ನು ಖಂಡಿಸಲು ಖಂಡಿತ ಒಂದಷ್ಟು ಜನ ಇದ್ದಾರೆ,ಹಾಗೆಂದು ಅವರನ್ನೆಲ್ಲ ಎಡಪಂಥೀಯರು ಎಂದು ಹೇಳುವ ಜಾಣತನ ಪ್ರದರ್ಶಿಸಬೇಡಿ.

ಮೂಲ ಲೇಖಕರು ಬರೆದಿರುವುದನ್ನು ಹಾಗೆಯೇ ಮಕ್ಕಳಿಗೆ ತಿಳಿಸುವುದು ಒಳ್ಳೆಯದು. ಸಂಸ್ಕೃತವನ್ನು ಸರಳೀಕರಿಸಿ, ಅನುವಾದಿಸಿ ಮಕ್ಕಳಿಗೆ ಹೇಳಿಕೊಟ್ಟರೆ ಮಕ್ಕಳು ಸಂಸ್ಕೃತ ಕಲಿಯಲಾದೀತೆ?

ನಿಮ್ಮ ರಾಜಕೀಯದ ತೆವಲಿಗೆ,ದ್ವೇಷಕ್ಕೆ ಮಕ್ಕಳ ವಿದ್ಯಾಭ್ಯಾಸ ದೊಡನೆ ಚೆಲ್ಲಾಟವಾಡಬೇಡಿ. ಕೊಂಚವಾದರೂ ಮನಸ್ಸಾಕ್ಷಿ,ನೈತಿಕತೆಗಳಿಗೆ ಬೆಲೆ ಕೊಡಿ. ಧರ್ಮಕ್ಕಾಗಿ ಕಚ್ಚಾಡುವವರೇ, ಮಕ್ಕಳಿಗಾಗುವ ಅನ್ಯಾಯವನ್ನು ಸರಿ ಮಾಡಲು ಮುಂದಾದರೆ ಸಾಕು ಧರ್ಮವಂತರಾ ಗುತ್ತೀರಿ.

ಸುಮ್ಮನೆ ಒಣ ಹೋರಾಟಗಳನ್ನು ಬಿಟ್ಟು,ಮಕ್ಕಳಿಗೆ, ಸಮಾಜಕ್ಕೆ,ದೇಶಕ್ಕೆ ಒಳಿತು ಮಾಡುವ ಬಗ್ಗೆ ಇನ್ನಾದರೂ ಚಿಂತಿಸಿ.


ಒಲವು

2 thoughts on “ಪಠ್ಯ ಪುಸ್ತಕ ಪರಿಷ್ಕರಣೆ

Leave a Reply

Back To Top